ಭಾರತೀಯ ಅಂಚೆ ಇಲಾಖೆ : “ಪ್ರೀತಿಯ ಬಾಪು, ನೀವು ಅಮರ” ➤ ಅಂಚೆ ಇಲಾಖೆ ಪತ್ರ ಬರಹ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.1.ಭಾರತೀಯ ಅಂಚೆ ಇಲಾಖೆಯು ರಾಷ್ಟ್ರೀಯ ಮಟ್ಟದಲ್ಲಿ “ಪ್ರೀತಿಯ ಬಾಪು, ನೀವು ಅಮರ” ಶೀರ್ಷಿಕೆಯಲ್ಲಿ ಪತ್ರ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿದೆ.


ಸ್ಪರ್ಧೆಯು 01.01.2019 ರಂದು 18 ವರ್ಷದ ಒಳಗಡೆ ವಯಸ್ಸಿನವರ ಹಾಗೂ 18 ವರ್ಷ ಮೇಲಿನ ವಯಸ್ಸಿನವರ 2 ವಿಭಾಗಗಳನ್ನು ಒಳಗೊಂಡಿರುತ್ತದೆ. ಇನ್‍ಲ್ಯಾಂಡ್ ಕಾರ್ಡ್ ಉಪಯೋಗಿಸಿ(500 ಪದಗಳು ಮೀರದ ಹಾಗೆ), ಅಥವಾ ಲಕೋಟೆಯಲ್ಲಿ (ಲಕೋಟೆ ಎ4 ಕಾಗದ , 1000 ಮೀರದ ಹಾಗೆ) ತಮ್ಮ ಪತ್ರವನ್ನು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು – 575002 ಈ ವಿಳಾಸಕ್ಕೆ ಕಳುಹಿಸಬೇಕು.ಕಳುಹಿಸುವವರ ವಿಳಾಸವು ಕಡ್ದಾಯವಾಗಿದ್ದು ಶೀರ್ಷಿಕೆ ” Entry for Dhai Akar 2019-20” ಎಂದು ಲಕೋಟೆಯ ಮೇಲೆ ನಮೂದಿಸಬೇಕಾಗುತ್ತದೆ. ಹಾಗೂ “ನಾನು 18 ವರ್ಷದ ಮೇಲ್ಪಟ್ಟು/ ಕೆಳಗೆ ವಿಭಾಗಕ್ಕೆ ಸೇರಿದ್ದೇನೆ” ಎಂದು ನಮೂದಿಸಬೇಕಾಗುತ್ತದೆ.

Also Read  ಶಬರಿಮಲೆ ದೇವಾಲಯದಲ್ಲಿ ಇಂದಿನಿಂದ ಮಂಡಲ ಪೂಜೆ, ಡಿ.26 ರವರೆಗೆ ದರ್ಶನಕ್ಕೆ ಅವಕಾಶ

ಇಂಗ್ಲೀಷ್ /ಹಿಂದಿ/ ಯಾವುದೇ ಸ್ಥಳೀಯ ಭಾಷೆಯಲ್ಲಿ ತಮ್ಮ ಲೇಖನವನ್ನು ಬರೆಯಬಹುದು. ಕಾಗದವನ್ನು ಅಂಚೆಗೆ ಹಾಕಲು ಕೊನೆಯ ದಿನ ನವೆಂಬರ್ 30. ರಾಜ್ಯ ಮಟ್ಟದ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.25000/-, ದ್ವಿತೀಯ ಬಹುಮಾನ ರೂ.10000/-, ತೃತೀಯ ಬಹುಮಾನ ರೂ.5000/- ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ರೂ. 50000/-, ದ್ವಿತೀಯ ಬಹುಮಾನ ರೂ.25000/-, ತೃತೀಯ ಬಹುಮಾನ ರೂ10000/- ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ವೆಬ್ ಸೈಟ್ www.indiapost.gov.in  ನೋಡಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.

Also Read  ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ➤ ಬಾಲಕಿಯ ಪೋಷಕರ ಆಕ್ರೋಶಕ್ಕೆ ಬಲಿಯಾದ ಆರೋಪಿ

error: Content is protected !!
Scroll to Top