ಡೆಂಗ್ಯೂ ಪ್ರಕರಣದ ಬಗ್ಗೆ ಮುನ್ನೆಚ್ಚರಿಕೆ ➤ ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.1.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೇರಳವಾಗಿ ಹರಡಿದೆ. ಇದನ್ನು ತಡೆಗಟ್ಟುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಸೊಳ್ಳೆಗಳು ನೀರು ನಿಲ್ಲುವ ಸ್ಥಳಗಳಲ್ಲಿ ಮೊಟ್ಟೆ ಇಟ್ಟು 7 ರಿಂದ 10 ದಿನಗಳಲ್ಲಿ ಸೊಳ್ಳೆಗಳಾಗಿ ಪರಿವರ್ತನೆ ಹೊಂದುತ್ತದೆ. ಇದಕ್ಜಿಕಾಗಿ  ಮುನ್ನೆಚ್ಚರಿಕೆ ನೀಡಿದೆ.

ಸೊಳ್ಳೆಗಳ ಸಂತನೋತ್ಪತ್ತಿಗೆ ಪೂರಕವಾಗುವ ನೀರು ನಿಲ್ಲುವ ಪ್ರದೇಶಗಳನ್ನು ದೇವಸ್ಥಾನದ ಹಿಂಭಾಗ/ಮುಂಭಾಗಗಳಲ್ಲಿ ಪರಿಶೀಲಿಸಿ ಕೂಡಲೇ ನಿವಾರಿಸಬೇಕು. ನೀರು ನಿಂತಿರುವುದು ಕಂಡು ಬಂದಲ್ಲಿ ಅದನ್ನು ತೆರವುಗೊಳಿಸಬೇಕು.

ಸೀಯಾಳದ ಚಿಪ್ಪನ್ನು ಎರಡು ಹೋಳುಗಳಾಗಿ ಮಾಡಿ, ಮಹಾನಗರ ಪಾಲಿಕೆ/ ಪಟ್ಟಣಪಂಚಾಯತ್/ ಗ್ರಾಮ ಪಂಚಾಯತ್/ ಪುರಸಭೆ/ ನಗರಸಭೆ ಇವರಿಗೆ ತೆರವುಗೊಳಿಸಲು ತಿಳಿಸಬೇಕು.

ಜಿಲ್ಲೆಗೆ ಸೇರಿದ ಹಿಂದೂ ಧಾರ್ಮಿಕ ಸಂಸ್ಥೆಗಳ ಕ್ಷೇತ್ರದಲ್ಲಿ ದಿನನಿತ್ಯ ನಡೆಯುವ ಅಭಿಷೇಕಗಳು, ನಾಗರ ಪಂಚಮಿ ಹಾಗೂ ಇನ್ನಿತರ ದಿನಗಳಂದು ನಡೆಸುವ ಸೀಯಾಳ ಅಭಿಷೇಕದ ಸಂದರ್ಭದಲ್ಲಿ ಸೀಯಾಳದ ನೀರು ಸರಿಯಾಗಿ ಹರಿದು ಹೋಗುವಂತೆ ಹಾಗೂ ದೇವಸ್ಥಾನದಲ್ಲಿ ಉಪಯೋಗಿಸುವ ತಟ್ಟೆ-ಲೋಟಗಳು ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಆಡಳಿತದಾರರು ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಎಚ್ಚರದಿಂದಿರಬೇಕು.

Also Read  ಕಡಬ ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ► ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಳಿನೆಲೆ ವಲಯ ಒಕ್ಕೂಟ ಜನಜಾಗೃತಿ ವೇದಿಕೆಯಲ್ಲಿ ಒಮ್ಮತದ ತೀರ್ಮಾನ

1-2 ದಿನಗಳಲ್ಲಿ ನೀರನ್ನು ತೆರವುಗೊಳಿಸದೇ ಇದ್ದು ಅದರಿಂದ ಲಾರ್ವಗಳು ಉತ್ಪತ್ತಿಯಾಗಿರುವುದು ಕಂಡುಬಂದಲ್ಲಿ, ಕಾರಣರಾದ ದೇವಾಲಯದ ಆಡಳಿತದಾರರ/ ಕಾರ್ಯನಿರ್ವಹಣಾಧಿಕಾರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top