ಮರ ಕೆಸು: ಆಷಾಢ ಮಾಸದ ವಿಶೇಷ ಖಾದ್ಯ ➤ ಮರ ಕೆಸು

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜುಲೈ.31. ಮರಕೆಸು ಮರದಲ್ಲಿ ಬೆಳೆ ಯುವ ಸಸ್ಯ. ಗೌಡ ಸಾರಸ್ವತರು ಇದು ಮರಾಳ್ವಾಪಾನ್‌ ಎನ್ನುವರು. ತುಳುವಿನಲ್ಲಿ ಇದನ್ನು ಮರತೇವು,  ಕೆಸುವಿನಲ್ಲಿ ಅನೇಕ 4 ವಿಧಗಳಿವೆ. ಕರಿ ಕೆಸು- ಇದರ ದಂಟು ಕಪ್ಪಗಿದ್ದು, ಎಲೆಯೂ ಹಸುರು ಮಿಶ್ರಿತ ಕಪ್ಪಾಗಿದೆ. ಇನ್ನೊಂದು ಬಿಳಿ ಕೆಸು- ತಿಳಿ ಹಸುರು ಬಣ್ಣದ ಕಾಂಡ ಮತ್ತು ಹಸುರು ಎಲೆ. ಚುಕ್ಕೆ ಕೆಸು- ಇದರ ಎಲೆಗಳಲ್ಲಿ ಕೆಂಪು ಬಣ್ಣದ ಚುಕ್ಕಿಗಳಿವೆ. ಇವು ನೆಲದಲ್ಲೇ ಬೆಳೆಯುವ ಸಸ್ಯವಾಗಿವೆ. ಮರಕೆಸು ಮರದ ಪೊಟರೆಯಲ್ಲಿ ಚಿಗುರಿ ಬೆಳೆಯುವ ಆರ್ಕಿಡ್‌ ಸಸ್ಯದಂತೆ ಬಳ್ಳಿಯಂತೆ ಹಬ್ಬಿ ಉದ್ದುದ್ದ ಹೃದಾಯಾಕಾರದ ಎಲೆ ಹೊಂದಿರುವ ಬಳ್ಳಿ ಸಸ್ಯ.  ಅಡಿಭಾಗ ತಿಳಿ ಕಂದು ಬಣ್ಣವಾಗಿದ್ದು ಎಲೆ ದಪ್ಪಗಿರುತ್ತದೆ. ಇದರ ಎಲೆಯ ಮೇಲ್ಭಾಗ ಕಡು ಹಸುರು.

ಮಳೆಗಾಲದಲ್ಲಿ, ಮರ ಕೆಸು ಮಳೆಗಾಲದಲ್ಲಿ ಅದರಲ್ಲೂ ಆಷಾಢ ಮಾಸದಲ್ಲಿ ವಿಪರೀತ ಬೆಳೆಯುತ್ತದೆ. ಮರದ ಪೊಟರೆ ಗಳಲ್ಲಿ ಬೇಸಗೆ ಕಾಲದಲ್ಲಿ ಹುದುಗಿದ್ದ ಪುಟ್ಟ ಪುಟ್ಟ ಗೆಡ್ಡೆಗಳು ಮಳೆ ಬೀಳಲಾರಂಭಿಸಿದಂತೆ ಚಿಗುರಲು ಪ್ರಾರಂಭಿಸಿ ನೋಡು ನೋಡುತ್ತಿದ್ದಂತೆ ಮರದ ಮೇಲಕ್ಕೆ ಹಬ್ಬಿ ಎಲೆ ಬಿಡಲು ಪ್ರಾರಂಭಿಸುತ್ತವೆ. ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರ, ಸಂಪಾಜೆ, ಚಿಕ್ಕಮಗಳೂರು ಜಿಲ್ಲೆಯ ಬಣಕಲ್‌, ಕೊಟ್ಟಿಗೆ ಹಾರ, ಹಾಸನ ಜಿಲ್ಲೆಯ ಸಕಲೇಶಪುರ, ಮಲೆನಾಡಿನ ಆಗುಂಬೆ ಪರಿಸರದ ಕಾಡುಗಳ ಮರದಲ್ಲಿ ಮರ ಕೆಸು ವಿಪರೀತ ಬೆಳೆಯುತ್ತಿದ್ದು ಇಲ್ಲಿಂದ ಮಂಗಳೂರು, ಉಡುಪಿ, ಕಾಸರಗೋಡು ಭಾಗಕ್ಕೆ ಬರುತ್ತವೆ.

Also Read  ತೂಕದ ಸಮಸ್ಯೆಯೇ..? ➤ ಹಾಗಿದ್ದಲ್ಲಿ ಸಿಹಿಗೆಣಸನ್ನು ಈ ರೀತಿಯಾಗಿ ಸೇವಿಸಿ

ಮರ ಕೆಸು ಪತ್ರೊಡೆ ಮಾಡಲು ಉಪಯೋಗಿಸುತ್ತಿ ದ್ದರೂ ಗೌಡ ಸಾರಸ್ವತರು ಇದರಿಂದ ಪತ್ರೊಡೆ ಪೋಡಿ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ. ಪತ್ರೊಡೆಯಂತೆ ಇದನ್ನು ಸುರುಳಿ ಸುತ್ತಿ, ಬಳಿಕ ಅಡ್ಡಲಾಗಿ ಚಕ್ರದಂತೆ ತುಂಡು ಮಾಡಿ ಎಣ್ಣೆಯಲ್ಲಿ ಕರಿದರೆ ಪತ್ರೊಡೆ ಪೋಡಿ ಯಾಯಿತು. ತವಾದಲ್ಲಿ ಹುರಿದು ಇದನ್ನು ಮಾಡು ವುದಿದೆ. ಇತರ ಕೆಸುವಿಗಿಂತ ಪೋಡಿ ಮಾಡಲು ಹೆಚ್ಚು ಸ್ವಾದಿಷ್ಟ ಎಲೆ ಮರ ಕೆಸು. ಇದನ್ನು ಕರಿಯಲು ಧೂಪದ ಎಣ್ಣೆ ಸೂಕ್ತ ಅನ್ನುತ್ತಾರೆ. ಕೆಸು ಉಷ್ಣವಾಗಿದ್ದು ಧೂಪದೆಣ್ಣೆ ತಂಪು ನೀಡುತ್ತದೆ ಅನ್ನುವ ಕಾರಣಕ್ಕೆ ಇದರ ಪ್ರಯೋಗ.

ಮರಗಳ ನಾಶದಿಂದ ಕಣ್ಮರೆ, ಹಿಂದೆ ಕಾಸರಗೋಡಿನ ರಸ್ತೆ ಬದಿಗಳಲ್ಲಿ ಗೋಳಿ ಮರಗಳ ಉದ್ದುದ್ದ ಸಾಲುಗಳಿದ್ದುವು. ಆ ದಿನಗಳಲ್ಲಿ ಈ ಮರದಲ್ಲಿ ಯಥೇತ್ಛ ಮರ ಕೆಸು ಪುಟಿಯುತ್ತಿತ್ತು. ಇಲ್ಲಿಂದಲೇ ಅನೇಕರು ಪುಕ್ಕಟೆಯಾಗಿ ಎಲೆ ಕಿತ್ತು ಮಳೆಗಾಲದ ರುಚಿ ರುಚಿ ಪಲ್ಯ ಮಾಡುತ್ತಿದ್ದರು. ಇದೀಗ ಗೋಳಿ ಮರಗಳು ರಸ್ತೆ ವಿಸ್ತರಣೆಯಿಂದ ನೆಲಕ್ಕುರುಳಿದ್ದು ಮರ ಕೆಸು ಸಂತತಿ ಕಾಲ್ಕಿತ್ತಿದೆ.

ಪತ್ರೊಡೆ ಪೋಡಿ
ಬದರಿನಾಥ ಯಾತ್ರೆಗೆ ಹೊಸ ದಿಲ್ಲಿಯಿಂದ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ರುದ್ರ ಪ್ರಯಾಗ – ಗಡ್ವಾಲ್‌ ದಾಟುವ ಸಮಯ ನಮ್ಮ ಜತೆ ಬಸ್ಸಿನಲ್ಲಿದ್ದ ಬಾಣಸಿಗರ ಕಣ್ಣಿಗೆ ಮರಗಳಲ್ಲಿ ಬೆಳೆದ ಮರ ಕೆಸು ಕಂಡು ಬಂತು. ಬಸ್ಸು ನಿಲ್ಲಿಸಿ ಮರ ಹತ್ತಿ ಮರ ಕೆಸು ಎಲೆಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ತಂದು ರಾತ್ರಿ ಊಟಕ್ಕೆ ಗರಿಗರಿ ಪತ್ರೊಡೆ ಪೋಡಿ ಮಾಡಿ ಬಡಿಸಿದ್ದರು. ಹಿಮಾಲಯದಲ್ಲಿ ಕಾಡುಗಳಲ್ಲೂ  ಬೆಳೆ ಬೆಳೆಯುತ್ತಿದೆ.

Also Read  ಮರ್ಧಾಳ: ಸಹನ ಜ್ಯೋತಿ ಆಯುರ್ವೇದ ಕ್ಲಿನಿಕ್ ಶುಭಾರಂಭ

ಔಷಧೀಯ ಗುಣ
ಮರ ಕೆಸು ಆಷಾಢ ಮಾಸದಲ್ಲೆ ಬೆಳೆಯುತ್ತಿದ್ದು ಈ ಕಾರಣಕ್ಕೆ ಔಷಧೀಯ ಗುಣ ಹೊಂದಿವೆ ಎಂದು ನಾಟೀ ವೈದ್ಯ ಪದ್ಧತಿ ತಿಳಿಸುತ್ತಿದೆ. ಹೊಟ್ಟೆಯಲ್ಲಿ ಸೇರಿರುವ ನಂಜು, ವಿಷಕಾರಕ ಅಂಶ ಇದರ ಸೇವನೆಯಿಂದ ಗುಣವಾಗುವುದಂತೆ. ಕಾಲಿಗೆ ಮುಳ್ಳು ಚುಚ್ಚಿದರೆ ಮರ ಕೆಸುವಿನ ಪುಟ್ಟ ಗೆಡ್ಡೆಯನ್ನು ಸೀಳಿ ತುಂಡನ್ನು ಆ ಭಾಗದಲ್ಲಿ ಕಟ್ಟಿ ಬಿಟ್ಟರೆ ಮರುದಿನ ಮುಳ್ಳು ಗಡ್ಡೆಯೊಂದಿಗೆ ಹೊರ ಬರುತ್ತದೆ. ಹಿಂದೆ ನಾಟಿ ವೈದ್ಯರು ಇದನ್ನೇ ಪ್ರಯೋಗಿ ಸುತ್ತಿದ್ದರೆಂದು ಹಿರಿಯರು ತಿಳಿಸುತ್ತಾರೆ. ದುಬಾರಿ ಬೆಲೆಯ ಮರ ಕೆಸು ಮಾರುಕಟ್ಟೆಗೆ ಬಂದರೆ ಚಪಲದ ನಾಲಗೆಗೆ ಸುಗ್ಗಿಯೋ ಸುಗ್ಗಿ !

error: Content is protected !!
Scroll to Top