ಪ್ರಾಮಾಣಿಕ ದಕ್ಷ ನಿಷ್ಠಾವಂತರಿಗೆ ಎಲ್ಲೂ ಗೌರವವಿದೆ – ಸತೀಶ್ ಕೆ

(ನ್ಯೂಸ್ ಕಡಬ) newskadaba.com ಕಡಬ, ಆ .14,  ದಕ್ಷರಾಗಿದ್ದು ಪ್ರಾಮಾಣಿಕತೆಯಿಂದ ಜವಾಬ್ದಾರಿಯುತ ಹುದ್ದೆ ನಿರ್ವಹಿಸಿದ ವ್ಯಕ್ತಿ ಎಲ್ಲಿ ಹೋದರು ಅಂತಹವರಿಗೆ ಗೌರವ ಸಲ್ಲುತ್ತದೆ ಎಂದು ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ ಹೇಳಿದರು. ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ತೋಟದ ಅಧೀಕ್ಷಕರಾಗಿ 2010 ರಿಂದ ಕರ್ತವ್ಯ ನಿರ್ವಹಿಸಿ ಇದೀಗ ಬೆಳಗಾಂ ಜಿಲ್ಲೆಯ ಗೋಕಾಕ್ ಪ್ರಾದೇಶಿಕ ವಲಯಕ್ಕೆ ವರ್ಗಾವಣೆಗೊಳ್ಳುತ್ತಿರುವ ವನ್ನೂರು ರವರನ್ನು ಐತ್ತೂರು ಗ್ರಾ.ಪಂ.ವತಿಯಿಂದ ಶುಕ್ರವಾರ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ವರ್ಗಾವಣೆಗೊಳ್ಳುತ್ತಿರುವ ತೋಟದ ಅಧೀಕ್ಷಕ ವನ್ನೂರು ರವರನ್ನು, ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ ರವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿ ಸುಂಕದಕಟ್ಟೆ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದಲ್ಲಿ ತೋಟದ ಅಧೀಕ್ಷಕರಾಗಿ ಕಳೆದ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದಂತಹ ಇವರು ಒಬ್ಬ ಪ್ರಾಮಾಣಿಕ ದಕ್ಷ ನಿಷ್ಠಾವಂತ ಅಧಿಕಾರಿಯಾಗಿದ್ದಾರೆ. ಸರಕಾರಿ ಸೇವೆ ಮಾಡುವವರಿಗೆ ವರ್ಗಾವಣೆ ಎಂಬುದು ನಿಶ್ಚಿತ ಎಲ್ಲೆಲ್ಲಿಗೆ ವರ್ಗಾವಣೆ ಆಗುತ್ತದೆಯೋ ಅಲ್ಲಿಗೆ ಹೋಗಲೇ ಬೇಕು. ಆದರೆ ಅಧಿಕಾರಿಗಳು ಕರ್ತವ್ಯದಲ್ಲಿ ನಿಷ್ಠಾವಂತರಾಗಿದ್ದರೆ ಅವರಿಗೆ ಎಲ್ಲಿ ಹೋದರೂ ಗೌರವ ಸಿಗುತ್ತದೆ. ನಮ್ಮ ಈ ಭಾಗದಲ್ಲಿ ಅರಣ್ಯ ನಿಗಮದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಇಲ್ಲಿಂದ ವರ್ಗಾವಣೆಗೊಳ್ಳುತ್ತಿರುವುದು ನಮಗೆಲ್ಲರಿಗೂ ಬೇಸರ ತಂದಿದೆ. ಯಾಕೆಂದರೆ ಅವರ ಪ್ರಾಮಾಣಿಕ ಕರ್ತವ್ಯ ನಿಷ್ಠೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು. ಅವರು ಎಲ್ಲೆ ಇರಲಿ ಎಲ್ಲಿಗೇ ವರ್ಗಾವಣೆ ಆಗಲಿ ಅವರ ಅಭಿಮಾನ ನಮಗೆ ಯಾವತ್ತೂ ಇದೆ. ಅವರು ಮತ್ತೇ ಇಲ್ಲಿಗೆ ವರ್ಗಾವಣೆಗೊಂಡು ಬರಬೇಕೆಂದು ನಮ್ಮ ಅಭಿಲಾಷೆಯಾಗಿದೆ ಎಂದರಲ್ಲದೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ದೇವರು ಸುಖಸಂಪತ್ತು ನೆಮ್ಮದಿ ನೀಡಲಿ ಎಂದು ಹಾರೈಸಿದರು.

Also Read  ಇಂದು (ಆ. 29) ಶಾಲಾ ಶಿಕ್ಷಣ-ಸಾಕ್ಷರತಾ ಸಚಿವರ ಪ್ರವಾಸ

ಸನ್ಮಾನ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ ತೋಟದ ಅಧೀಕ್ಷರ ವನ್ನೂರುರವರು ನಾನು ರಾಜ್ಯದ ಒಂದು ಮೂಳೆಯಿಂದ ಇಲ್ಲಿಗೆ ಬಂದು ಕಳೆದ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದು ನನಗೆ ನಿರಂತರ ಸಹಕಾರ ನೀಡಿ ನನ್ನೊಂದಿಗೆ ಒಡನಾಡಿಯಾಗಿ ಸಹಕರಿಸಿದ ಇಲ್ಲಿಯ ಗ್ರಾ.ಪಂ.ಅಧ್ಯಕ್ಷರಾದ ಸತೀಶ್ ಕೆ ಹಾಗೂ ಈ ಭಾಗದ ಎಲ್ಲಾ ಗ್ರಾಮಸ್ಥರಿಗೂ ನಿಮ್ಮ ಸಹಕಾರಕ್ಕೆ ಅಭಾರಿಯಾಗಿದ್ದೇನೆ. ನನಗೆ ನನ್ನ ಊರಿನ ಹತ್ತಿರ ವರ್ಗಾವಣೆ ಆಗಿರುವುದರಿಂದ ನಾನು ಅಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗಿದ್ದರೂ ಈ ಪ್ರದೇಶದವರನ್ನು ಎಂದೂ ಮರೆಯುವಂತಿಲ್ಲ. ಮತ್ತೇ ಅವಕಾಶ ಸಿಕ್ಕಿದರೆ ಪುನಃ ಈ ಭಾಗಕ್ಕೆ ಬರುತ್ತೇನೆ ಎಂದು ತಮ್ಮ ಮನದಾಳದ ಮಾತಿನೊಂದಿಗೆ ಸನ್ಮಾನಿಸಿ ಗೌರವಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.

Also Read  ನೈಟ್ ಕರ್ಫ್ಯೂ ವಿಚಾರವನ್ನು ಜಾತಿ-ಧರ್ಮದ ಬಣ್ಣದಲ್ಲಿ ನೋಡಬೇಡಿ ➤ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ತಿರುಪತಿ ಎನ್ಕೂಪ್ರವರು ಮಾತನಾಡಿ ವರ್ಗಾವಣೆಗೊಳ್ಳುತ್ತಿರುವ ವನ್ನೂರುರವರ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿ ಮತ್ತೊಮ್ಮೆ ಇಲ್ಲಿಗೆ ಬರುವಂತೆ ಕೇಳಿಕೊಂಡರು.
ತಾ.ಪಂ.ಸದಸ್ಯ ಪಿ.ವೈ ಕುಸುಮ ಮಾತನಾಡಿ ಶುಭಹಾರೈಸಿದರು. ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಪಿ.ಪಿ ಮತ್ತ್ಯಾಸ್, ಯೂಸುಫ್ ಎಂ.ಪಿ, ಇಸ್ಮಾಯಿಲ್ ಎಂ.ಎಚ್, ಶ್ರೀಧರ ಗೌಡ, ಧರ್ಮಪಾಲ ಕೆ, ಜಯಲಕ್ಷ್ಮೀ, ಗೋಮತಿ, ಮುತ್ತುಕುಮಾರಿ, ನಸೀರಾ ಸಿ.ಕೆ, ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್‌ ರೋಡ್ರಿಗಸ್ ಸ್ವಾಗತಿಸಿ, ಸನ್ಮಾನಿತರ ಬಗ್ಗೆ ಅಭಿನಂದಿಸಿ ಕೊನೆಗೆ ವಂದಿಸಿದರು.

error: Content is protected !!
Scroll to Top