ಕಾಫಿ ಸಾಮ್ರಾಜ್ಯ ಕಟ್ಟಿದ ಮಾಲಕ ನಿಗೂಢವಾಗಿ ನಾಪತ್ತೆ ➤ ಶೇಕಡಾ 20.ರಷ್ಟು ಕುಸಿತ ಕಂಡ ಕಾಫಿ ಡೇ ಶೇರುಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ಮಾಜಿ ಮುಖ್ಯಮಂತ್ರಿ, ಎಸ್. ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ದಾರ್ಥ್‌ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

 

ಪ್ರತಿಷ್ಠಿತ ಉದ್ಯಮಿಯಾಗಿರುವ ಸಿದ್ದಾರ್ಥ್‌ ಕೆಫೆ ಕಾಫಿ ಡೇ ಎಂಬ ಬಹುರಾಷ್ಟ್ರೀಯ ಕಂಪೆನಿಯ ಮಾಲಕ. ಇದಲ್ಲದೇ ಎಬಿಸಿ ಸಂಸ್ಥೆಗಳು ಮತ್ತು ಚೆನ್ನೈನ ಲಾಜಿಸ್ಟಿಕ್‌ ಕಂಪೆನಿಗಳನ್ನು ಸಿದ್ದಾರ್ಥ್‌ ಕುಟುಂಬ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎಕರೆ ಜಾಗದಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಕೆಫೆ ಕಾಫಿ ಡೇ, ಅನೇಕ ದೇಶಗಳಲ್ಲಿ ತನ್ನ ಶಾಖೆ ಹೊಂದಿದೆ.ವಿ.ಜಿ. ಸಿದ್ದಾರ್ಥ್ 1996ರ ಜುಲೈನಲ್ಲಿ ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಕೆಫೆ ಕಾಫಿ ಡೇಯ ಮೊದಲ ಶಾಖೆ ಆರಂಭಿಸಿದ್ದರು.

Also Read  ಬಂಟ್ವಾಳ: ರಸ್ತೆ ಕಾಂಕ್ರೀಟಿಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಗಳಿಂದ ಶಿಲಾನ್ಯಾಸ

ಸದ್ಯ ದೇಶ ವಿದೇಶಗಳಲ್ಲಿ ನೂರಾರು ಶಾಖೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವಿಜಿ ಸಿದ್ದಾರ್ಥ ಕಾಫಿ ಡೇ ಅಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರು ಆಗಿರುವ ಸೋಮವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವು ಹಿನ್ನೆಲೆಯಲ್ಲಿ ಅವರ  ಒಡೆತನದ ಕಾಫಿ ಡೇ ಎಂಟರ್ ಪ್ರೈಸಸ್ ಮತ್ತು ಎಸ್ ಐಸಿಎಎಲ್ ಲಾಗಿಸ್ಟಿಕ್ಸ್ ಶೇರುಗಳು ಶೇ.20ರಷ್ಟು ಕುಸಿತ ಕಂಡಿದೆ. ಶೇರುಪೇಟೆಯಲ್ಲಿ ಕಾಫಿ ಡೇ ಸಂಸ್ಥೆಯ ಶೇರು ಸೂಚ್ಯಂಕ ಶೇ.20ರಷ್ಟು ಇಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.

 

error: Content is protected !!
Scroll to Top