ಭತ್ತ ಬೆಳೆಗಾರರಿಗೆ “ಕರಾವಳಿ ಪ್ಯಾಕೇಜ್” ➤ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಭತ್ತದ ಬೇಸಾಯವನ್ನು ಸತತವಾಗಿ ಹಲವಾರು ವರ್ಷಗಳಿಂದ ಅಧಿಕ ಮಳೆ ಬೀಳುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.

ಈ ಜಿಲ್ಲೆಗಳ ಪ್ರದೇಶವು ಭೌಗೋಳಿಕವಾಗಿ ತಗ್ಗು ದಿಣ್ಣೆಯಿಂದ ಕೂಡಿದ್ದು ಮಣ್ಣಿನ ಫಲವತ್ತತೆಯು ಸಂರಕ್ಷಣೆ ಕಷ್ಟಸಾಧ್ಯ, ಕಡಿಮೆ ಹಿಡುವಳಿ, ಕೃಷಿ ಕಾರ್ಮಿಕ ಸಮಸ್ಯೆ ಅಧಿಕವಾಗಿರುವುದರಿಂದ ಭತ್ತದ ಬೆಳೆ ಉತ್ಪಾದನಾ ವೆಚ್ಚ ಅಧಿಕವಾಗಿರುತ್ತದೆ. ರೈತರಿಗೆ ಸಾಂಸ್ಥಿಕ ಸಾಲ ಸೌಲಭ್ಯದ ಕೊರತೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಭತ್ತ ಬೆಳೆಯುವಲ್ಲಿ ರೈತ ಸಮುದಾಯದ ಆಸಕ್ತಿ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕರಾವಳಿ ರೈತರನ್ನು ಉತ್ತಮವಾಗಿ ಭತ್ತವನ್ನು ಬೆಳೆಯಲು ಪ್ರೇರೆಪಿಸಲು ಹೆಕ್ಟೇರಿಗೆ ರೂ.7500/-ಗಳಂತೆ ಪ್ರೋತ್ಸಾಹಧನವನ್ನು “ಕರಾವಳಿ ಪ್ಯಾಕೇಜ್“ ಎನ್ನುವ ಕಾರ್ಯಕ್ರಮದ ಮೂಲಕ ನೀಡಲು ಉದ್ದೇಶಿಸಲಾಗಿದೆ.

ಮಾನದಂಡಗಳು:- ಮಳೆಯಾಶ್ರಿತದಲ್ಲಿ ಭತ್ತ ಬೆಳೆಯುವ ಪಟ್ಟಾ (ಪಹಣಿ) ಹೊಂದಿದ ರೈತರಾಗಿರಬೇಕು. ಜಮೀನಿನ ಖಾತೆಯನ್ನು ತಮ್ಮ ಅಥವಾ ತಮ್ಮ ಪೂರ್ವಜರ ಹೆಸರಿನಲ್ಲಿ ಇದ್ದು, ಅವರ ಅನುಭವದಲ್ಲಿರಬೇಕು. ಇಂತಹ ರೈತರು ಈ ಯೋಜನೆಯ ಉಪಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ. (ಈ ಬಗ್ಗೆ ಕಂದಾಯ ಇಲಾಖೆಯಿಂದ ದೃಢೀಕೃತ ಪತ್ರವನ್ನು ಸಲ್ಲಿಸತಕ್ಕದ್ದು), ಜಂಟಿ ಖಾತೆಯನ್ನು ಹೊಂದಿದ ಅರ್ಜಿದಾರರಲ್ಲಿ ಒಬ್ಬ ಮಾತ್ರ ಈ ಪ್ರಯೋಜನೆಯನ್ನು ಪಡೆಯಬಹುದು ಹಾಗೂ ಈ ರೈತ ಇತರೆ ಹಿಸ್ಸೆದಾರರಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯತಕ್ಕದ್ದು.

Also Read  ಬಿಜೆಪಿ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಇಬ್ಬರು ಕಾರ್ಯಕರ್ತರು ಜಿಲ್ಲಾಧಿಕಾರಿ ವಶಕ್ಕೆ.!

ನೇರ ಕೂರಿಗೆ ಬಿತ್ತನೆ (DSR)/ ಡ್ರಂ ಸೀಡರ್‍ನಿಂದ ಬಿತ್ತನೆ, ಈ ಯಾಂತ್ರೀಕೃತ ನಾಟಿಸುಧಾರಿತ ಬೇಸಾಯಕ್ರಮಗಳನ್ನು ಅಳವಡಿಸಿಕೊಂಡಿರಬೇಕು. ಸ್ಥಳೀಯ ತಳಿಗಳ ಬಳಕೆಗೆ (ಉದಾ: ಕೆಂಪು ಅಕ್ಕಿ, ಕರಿ ಕಗ್ಗ, ಬಿಳಿ ಕಗ್ಗ ಇತ್ಯಾದಿ) ಆದ್ಯತೆ ನೀಡಿ ಪರಿಗಣಿಸಲಾಗುವುದು. ಫಲಾನುಭವಿಗಳ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಿ ಜೇಷ್ಠತಾ ಪಟ್ಟಿಯನ್ನು ತಯಾರಿಸಿ, ಆಯ್ಕೆ ಮಾಡಲಗುವುದು. ಇಲಾಖೆಯFRUITS  ತಂತ್ರಾಂಶದಲ್ಲಿ ರೈತರ ಫಲಾನುಭವಿಗಳ ನೊಂದಣಿ ಕಡ್ಡಾಯವಾಗಿರುತ್ತದೆ.

ಕಡ್ಡಾಯವಾಗಿ ನಿಗದಿತ ಸುಧಾರಿತ ಬೇಸಾಯ ಕ್ರಮಗಳ ತಾಂತ್ರಿಕತೆಗಳ ಅನುಷ್ಠಾನ ಛಾಯಾಚಿತ್ರಗಳನ್ನು ಮೊಬೈಲ್ ಆ್ಯಪ್ ಮುಖಾಂತರ ಜಇಪಿಎಸ್ ಸಮೇತ ಆಯಾ ಹಂತದಲ್ಲಿ ದಾಖಲಿಸಬೇಕು.ಹೆಚ್ಚಿನ ವಿವರಗಳಿಗೆ ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು/ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಹಿಂಪಡೆಯಲು ಆಗ್ರಹ.!

error: Content is protected !!
Scroll to Top