ಪ್ರತಿಪಕ್ಷಗಳ ಯಾವುದೇ ಆಮಿಷಕ್ಕೆ ಒಳಗಾಗದಂತೆ ಸೂಚನೆ ➤ಬಿಎಸ್ ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.29.ಭಾನುವಾರ ಸಂಜೆ ನಗರದ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಸೋಮವಾರ ಸದನದಲ್ಲಿ ಬಹುಮತ ಸಾಬೀತು ವೇಳೆ ಎಲ್ಲರೂ ಒಗ್ಗಟ್ಟಾಗಿ ಸರ್ಕಾರದ ಪರ ಮತ ಚಲಾಯಿಸುವಂತೆ ನೂತನ ಶಾಸಕರಿಗೆ ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾಗಬೇಡಿ ಎಂದು ತಾಕೀತು ಮಾಡಿದ್ದಾರೆ. ಸೋಮವಾರ ಅಧಿವೇಶನದಲ್ಲಿ ಶಾಸಕರು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ತೀರ್ಮಾನ ಸಂವಿಧಾನಬಾಹಿರ. ಆದರೆ ಸದ್ಯದಮಟ್ಟಿಗೆ ನಮಗೆ ಬಹುಮತ ಸಿಕ್ಕಂತಾಗಿದೆ, ಹಾಗಂತ ಮೈಮರೆಯುವುದು ಬೇಡ. ಸೋಮವಾರದ ಅಧಿವೇಶನಕ್ಕೆ ಎಲ್ಲರೂ ಕಡ್ಡಾಯ ಹಾಜರಿರಬೇಕು.

ಒಂದೊಂದು ಮತವೂ ಅಮೂಲ್ಯ ಎಂದು ಮುಖಂಡರು ಶಾಸಕರಿಗೆ ಸೂಚಿಸಿದ್ದಾರೆ. ದೋಸ್ತಿ ಪಕ್ಷಗಳು ರಿವರ್ಸ್ ಆಪರೇಷನ್ ಮಾಡಬಹುದು ಎಂಬ ಭೀತಿ ಬಿಜೆಪಿ ಪಾಳಯವನ್ನು ಆವರಿಸಿದೆ. ಹೀಗಾಗಿ ಬಿಜೆಪಿ ತನ್ನೆಲ್ಲ ಶಾಸಕರನ್ನು ಮತ್ತೊಮ್ಮೆ ಹೋಟೆಲ್​ನಲ್ಲಿ ಇರಿಸಿಕೊಂಡಿದೆ. ಮೊದಲು ಶಾಸಕಾಂಗ ಪಕ್ಷದ ಸಭೆ ವಿಧಾನಸೌಧದಲ್ಲಿ ನಿಗದಿಪಡಿಸಲಾಗಿತ್ತು. ಆದರೆ ರಿವರ್ಸ್ ಆಪರೇಷನ್ ಭೀತಿಯಿಂದ ಖಾಸಗಿ ಹೋಟೆಲ್​ಗೆ ಸ್ಥಳಾಂತರಿಸಲಾಯಿತು.

Also Read  ಗುತ್ತಿಗಾರು : ಅಕ್ರಮ ಗೋ ಸಾಗಾಟ, ಆರೋಪಿಗಳು ಪೊಲೀಸರ ವಶಕ್ಕೆ.!!

ಲಗೇಜ್ ಜತೆ ಶಾಸಕಾಂಗ ಸಭೆಗೆ ಬರುವಂತೆ ಭಾನುವಾರ ಬೆಳಗ್ಗೆ ಎಲ್ಲ ಶಾಸಕರಿಗೆ ಸಂದೇಶ ರವಾನೆಯಾಯಿತು. ಸಭೆ ಬಳಿಕ ಅದೇ ಹೋಟೆಲ್​ನಲ್ಲಿ ತಂಗಿರುವ ಶಾಸಕರು ಸೋಮವಾರ ಅಲ್ಲಿಂದಲೇ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ. ಸಭೆಗೆ ಆಗಮಿಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಯಡಿಯೂರಪ್ಪ ಸಿಎಂ ಆದ ಬಳಿಕ ನಡೆದ ಮೊದಲ ಶಾಸಕಾಂಗ ಸಭೆಯಲ್ಲಿ ಪಕ್ಷದ ಪರವಾಗಿ ಯಡಿಯೂರಪ್ಪ ಅವರನ್ನು ಶಾಲು ಹೊದೆಸಿ ಸನ್ಮಾನಿಸಿದರು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸೋಮವಾರ ಎಲ್ಲ ಶಾಸಕರೂ ಹಾಜರಿರುತ್ತಾರೆ. ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಪಡಿಸುತ್ತೇವೆ ಎಂದು ತಿಳಿಸಿದರು.ವಿಧಾನ ಪರಿಷತ್ತಿನಲ್ಲಿ ಸಭಾನಾಯಕರ ನೇಮಕ ಆಗದಿರುವುದರಿಂದ ಸರ್ಕಾರ ಸೋಮವಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ಸಿಎಂ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಯಾಚಿಸುವ ಜತೆಗೆ ಧನವಿನಿಯೋಗ ಮಸೂದೆಗೂ ಒಪ್ಪಿಗೆ ಪಡೆಯಬೇಕಾಗಿದೆ.

Also Read  ಚನ್ನಪಟ್ಟಣ ಉಪಚುನಾವಣೆ: ಸಿಪಿ ಯೋಗೇಶ್ವರ್ಗೆ ಭರ್ಜರಿ ಗೆಲುವು

ಈ ಮಸೂದೆ ಮೇಲ್ಮನೆಯಲ್ಲೂ ಅಂಗೀಕಾರಗೊಳ್ಳಬೇಕು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಲ್ಮನೆ ಕಾರ್ಯದರ್ಶಿ ಮಹಾಲಕ್ಷ್ಮಿ, ಸಚಿವ ಸಂಪುಟ ರಚನೆ ನಂತರ ಸಭಾನಾಯಕರನ್ನು ನೇಮಿಸಲಾಗುತ್ತದೆ. ಹಾಗಾಗಿಈಅಧಿವೇಶನದಲ್ಲಿಸಮಸ್ಯೆಆಗುವುದಿಲ್ಲಎಂದಿದ್ದಾರೆ.ಮುಖ್ಯಮಂತ್ರಿಯಡಿಯೂರಪ್ಪನೇತೃತ್ವದಲ್ಲಿಬಹುಮತಸಾಬೀತುಪಡಿಸುತ್ತೇವೆ.ರಾಜ್ಯಕ್ಕೆಉತ್ತಮಸರ್ಕಾರನೀಡುತ್ತೇವೆ.ರಾಜ್ಯಹಾಗೂಕೇಂದ್ರದಲ್ಲಿಮೊದಲಬಾರಿಗೆಬಿಜೆಪಿಅಧಿಕಾರಕ್ಕೆಬಂದಿದೆ. ಎಚ್.ಡಿ. ದೇವೇಗೌಡರವಿಷಯಾಧಾರಿತಬೆಂಬಲದಹೇಳಿಕೆಗಮನಿಸಿದ್ದು, ಯಾವವಿಷಯಎಂಬುದುಗೊತ್ತಾಗಲಿಲ್ಲ.

error: Content is protected !!
Scroll to Top