ಮೂಡುಬಿದರೆ: ಯಕ್ಷಸಂಗಮ ➤ 20ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಸನ್ಮಾನ ಸಮಾರಂಭ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಜುಲೈ.27.ದ.ಕ ಜಿಲ್ಲೆಯ ಜಾನಪದ ಕಲೆ ಯಕ್ಷಗಾನ.ಯಕ್ಷಸಂಗಮದ 20ನೇ ವರ್ಷದ ಯಕ್ಷಸಂಗಮ ಕಾರ್ಯಕ್ರಮ ಇಂದು  ಸಮಾಜಮಂದಿರ ಮೂಡಬಿದರೆ ಇಲ್ಲಿ ರಾತ್ರಿ 9.00ಗಂಟೆಗೆ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಮೂಲತಃ ಮಿಜಾರಿನ ಪ್ರಮುಖ  ಕಟೀಲು ಮೇಳದ ಪ್ರಸಿದ್ಧ ಮದ್ದಲೆವಾದಕ ಮೋಹನ್‌ ಶೆಟ್ಟಿಗಾರ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಇವರ ಸಾಧನೆ ಅಪಾರ, 15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್‌ ರವರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತುಕೊಂಡು ಪರಿಣತರಾದರು.ಕುಲಕಸುಬಾದ ಕೈಮಗ್ಗದಲ್ಲೇ ಮುಂದುವರಿದರೂ ಹಲವಾರು ಮೇಳಗಳಿಗೆ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದರು.1982ರಲ್ಲಿ ಕಟೀಲಿನ 3ನೇ ಮೇಳ ಆರಂಭವಾದಾಗ ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರ ಆಹ್ವಾನದ ಮೇರೆಗೆ ಮೂರನೇ ಮೇಳ ಸೇರಿದರು.

ಮೇಳದಲ್ಲಿದ್ದ ಕಲಾವಿದರೂ ದಿಗ್ಗಜರೇ ಆಗಿದ್ದ ಕಾರಣ ಶೆಟ್ಟಿಗಾರು ಹಿಮ್ಮೇಳ ವಾದನದಲ್ಲಿ ನೈಪುಣ್ಯತೆ ಗಳಿಸಿದರು. ಮಂಡೆಚ್ಚರು ಅಸ್ತಂಗತರಾದ ನಂತರ ದಿನೇಶ ಅಮ್ಮಣ್ಣಾಯ , ಬೊಟ್ಟಿಕೆರೆ ಪುರುಷೋತ್ತಮ ಪೂಂಜರಂತಹ ಭಾಗವತ ದಿಗ್ಗಜರಿಗೂ ಮದ್ದಲೆವಾದಕರಾಗಿ ಮೆರೆದರು . 1990ರಲ್ಲಿ ಮೇಳ ಬಿಟ್ಟು ಮನೆಯಲ್ಲೇ ಕೈಮಗ್ಗದತ್ತ ಹೊರಳಿದರು.ಆದರೂ 1992ರಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಒತ್ತಾಯಕ್ಕೆ ಪುನಃ ಕಟೀಲು 1ನೇ ಮೇಳ ಸೇರಿದರು . ನಂತರ ಕಟೀಲು 4ನೇ ಮೇಳ ಆರಂಭವಾದಾಗ ಅದಕ್ಕೆ ವರ್ಗಾಯಿಸಲ್ಪಟ್ಟಾಗ ಸುಪ್ರಸಿದ್ಧ ಭಾಗವತರಾದ ದಿ.ಕುಬಣೂರು ಶ್ರೀಧರ ರಾಯರ ಒಡನಾಟದಲ್ಲಿ ಮಿಂಚಿದರು .

Also Read  ಸುಳ್ಯ ಶಾಸಕ ಅಂಗಾರರಿಂದ ನಾಳೆ ಕಡಬದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ

ಪ್ರಸ್ತುತ ಕಟೀಲು 4ನೇ ಮೇಳದಲ್ಲಿ ವೃತ್ತಿ ನಿರತರಾಗಿರುವ ಮೋಹನ ಶೆಟ್ಟಿಗಾರರು 37 ವರ್ಷಗಳ ತಿರುಗಾಟದ ಅನುಭವ ಹೊಂದಿದ್ದಾರೆ.ಹಿಮ್ಮೇಳದ ವಾದನದ ಘಾತ ಪೆಟ್ಟು , ಹದಪೆಟ್ಟು , ಮೆದು ನುಡಿತ – ಇವೆಲ್ಲವನ್ನೂ ಸಂದಭೋìಚಿತವಾಗಿ ಬಳಸುವ ಶೆಟ್ಟಿಗಾರರ ವಾದನದಲ್ಲಿ ಯಕ್ಷಗಾನೀಯವಾದ ಇಂಪಿದೆ , ಕಂಪಿದೆ . ರಾಕ್ಷಸ ಪಾತ್ರಗಳ ತೆರೆಪೊರಪ್ಪಾಟು , ಹನುಮಂತನ ಪ್ರವೇಶ , ಕಿರಾತನ ಪ್ರವೇಶ ,ಶ್ರೀರಾಮನ – ಶ್ರೀಕೃಷ್ಣನ ಒಡ್ಡೋಲಗ ಮುಂತಾದ ಯಕ್ಷಗಾನದ ಅಪೂರ್ವ ಸನ್ನಿವೇಶಗಳ ಹಿಮ್ಮೇಳ ವಾದನ ಅರಿತವರಲ್ಲಿ ಶೆಟ್ಟಿಗಾರರೂ ಓರ್ವರು.

Also Read  ➤ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ 4 ನೇ ವರ್ಷದ ಪುಣ್ಯಸ್ಮರಣೆ!

error: Content is protected !!
Scroll to Top