ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ➤ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.27.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಕರ ಬಾಲಮಂದಿರ, ಮಂಗಳೂರು ಸಂಸ್ಥೆಗೆ ಗ್ರೂಫ್ ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸೇವೆಯನ್ನು ಒಂದು ವರ್ಷದ ಅವಧಿಗೆ ಸೂಕ್ತ ದರ್ಜೆಯ ನೊಂದಾಯಿತ ಸಂಸ್ಥೆಗಳಿಂದ  ಟೆಂಡರ್ ಆಹ್ವಾನಿಸಲಾಗಿದೆ.


ಟೆಂಡರ್ ಪತ್ರಗಳನ್ನು ಕರ್ನಾಟಕ ಸರಕಾರದ ಇ-ಪ್ರೂಕ್ಯೂರ್‍ಮೆಂಟ್ ಪೋರ್ಟಲ್‍ನಿಂದ ಜುಲೈ 15 ರಿಂದ ಡೌನ್‍ಲೋಡ್ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನ. ಆಗಸ್ಟ್ 17 ಸಂಜೆ 4.30 ಗಂಟೆಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ ಬೊಂದೆಲ್ ಮಂಗಳೂರು ಇಲ್ಲಿ ತಾಂತ್ರಿಕ ಲಕೋಟೆ ತೆರೆಯಲಾಗುವುದು.ಟೆಂಡರ್ ದಾಖಲೆಗಳು ಹಾಗೂ ಟೆಂಡರ್ ಬಗ್ಗೆ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ https://eproc.karnataka.gov.in, ದೂರಾವಾಣಿ ಸಂಖ್ಯೆ- 0824-2485401, 9741493850 ಸಂಪರ್ಕಿಸಬೇಕು ಎಂದು ಅಧೀಕ್ಷಕರು ಬಾಲಕರ ಬಾಲಮಂದಿರ, ಕೃಷ್ಣನಗರ, ಬೊಂದೇಲ್, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಪ್ರಗತಿ ಪರಿಶೀಲನಾ ಸಭೆ ಮುಂದೂಡಿಕೆ

error: Content is protected !!
Scroll to Top