ಕಡಬ: ಅಖಂಡ ಭಾರತ ಸಂಕಲ್ಪ ದಿನ – ಪಂಜಿನ ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಆ .14, ಹಿಂದು ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ದೇಶ ವಿಭಜನೆಯ ಕರಾಳ ದಿನವನ್ನು ನೆನಪಿಸುವ ಅಖಂಡ ಭಾರತ ಸಂಕಲ್ಪ ದಿನ-ಪಂಜಿನ ಮೆರವಣಿಗೆ ಕಾರ್ಯಕ್ರಮ ಆದಿತ್ಯವಾರ ರಾತ್ರಿ ಕಡಬದಲ್ಲಿ ನಡೆಯಿತು.

ಕಡಬ ಎಪಿಎಂಸಿ ಸಂತೆ ಮಾರುಕಟ್ಟೆ ಬಳಿಯಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಕಡಬ ಪೇಟೆಯಲ್ಲಿ ಸಾಗಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ವಿಟ್ಲ ತಾಲೂಕು ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಗಣರಾಜ್ ಭಟ್ ಕೆದಿಲ ದಿಕ್ಸೂಚಿ ಭಾಷಣ ಮಾಡಿದರು. ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಸಹ ಸಂಚಾಲಕ ರವಿರಾಜ ಶೆಟ್ಟಿ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಡಬ ತಾಲೂಕು ಹಿಂಜಾವೇ ಅಧ್ಯಕ್ಷ ಪ್ರಶಾಂತ್ ಪಂಜೋಡಿ, ಹಿಂದೂ ಜಾಗರಣ ವೇದಿಕೆಯ ಮುಖಂಡ ಜಯಂತ್ ಬೆಳ್ಳಾರೆ, ಕಡಬ ಹಿಂಜಾವೇ ಸಂಚಾಲಕ ವೆಂಕಟ್ರಮಣ ಕೋಡಿಂಬಾಳ ಉಪಸ್ಥಿತರಿದ್ದರು. ರಶ್ಮಿ, ದೀಪ್ತಿ, ದೀಕ್ಷಾ ಪ್ರಾರ್ಥನೆ ಹಾಡಿದರು. ಚರಣ್ ಕೋಡಿಂಬಾಳ ವಂದೆ ಮಾತರಂ ಹಾಡಿದರು, ಹಿಂಜಾವೇ ಜಿಲ್ಲಾ ಸಹ ಸಂಚಾಲಕ ಮೋಹನ್ ಕೊೖಲ ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ್ ರೈ ಕುಡಾಲ, ಮಲ್ಲೇಶ್ ಆಲಂಕಾರ್ ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು. ಕೊನೆಯಲ್ಲಿ ಪ್ರತಿಜ್ಞಾ ವಿಧಿ ಬೋದಿಸಲಾಯಿತು. ಕಡಬ ಪೊಲೀಸರ ನೇತೃತ್ವದಲ್ಲಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

Also Read  ಸರ್ಕಾರಿ ವಕೀಲರುಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ

 

error: Content is protected !!
Scroll to Top