ರೆಂಜಿಲಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಬಿವೃದ್ದಿ ಯೋಜನೆ ➤ ಪದಗ್ರಹಣ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಬಿವೃದ್ದಿ ಯೋಜನೆಯ ಬಿಳಿನೆಲೆ ವಲಯದ ಪ್ರಗತಿ ಭಂದು ಸ್ವಸಹಾಯ ಸಂಘಗಳ ರೆಂಜಿಲಾಡಿ ಓಕೂಟದ ಪದಗ್ರಹಣ ಕಾರ್ಯಕ್ರಮ ರೆಂಜಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.


ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯವೈಕರಿಯಿಂದ ಗ್ರಾಮೀಣ ಭಾಗದ ಜನತೆಯ ಅರ್ಥಿಕ ಸದೃಡರಾಗಲು ಕಾರಣವಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಗತಿಬಂಧು ಸ್ವಸಹಾಯ ಸಂಘಗಳ ರೆಂಜಿಲಾಡಿ ಓಕ್ಕೂಟದ ನಿಕಟಪೂರ್ವ ಅದ್ಯಕ್ಷ ಶ್ರೀಯುತ ಸೂರಪ್ಪ ಗೌಡ ಮಾತನಾಡಿ, ಗ್ರಾಮೀಣ ಭಾಗದ ಜನತೆ ಶ್ರೋಯೊಭಿವೃದ್ದಯಲ್ಲಿ ಯೋಜನೆಯ ಪಾತ್ರ ಅನನ್ಯ ಎಂದರು.

Also Read  ಬಂಟ್ವಾಳ :ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದ ಮುಖ್ಯಸ್ಥ ರವೀಂದ್ರನ್ ಗುರುಸ್ವಾಮಿ, ನೂಜಿಬಾಳ್ತಿಲ ಬೆದನಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಸುಬ್ರಹ್ಮಣ್ಯ ಸೀತಾರಾಂ ಭಟ್ಟ್, ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ದರ್ಣಪ್ಪ ಗೌಡ , ರೆಂಜಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮೇದಪ್ಪ ಗೌಡ , ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಸದಸ್ಯ ರಾಜು, ಶುಭಹಾರೈಸಿದರು. ಕರುಣಾಕರ ಕುಬಲಾಡಿ ಸ್ವಾಗತಿಸಿದರು. ಚಂದ್ರಾವತಿ ವಂದಿಸಿದರು ಮರ್ದಾಳ ಸೇವಾ ಪ್ರತಿನಿಧಿ ಸತೀಶ್ ಎ ನಿರೂಪಿಸಿದರು.

error: Content is protected !!
Scroll to Top