ಬಿಎಸ್ ವೈ ಪ್ರಮಾಣವಚನ ➤ಇಂದು ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವಿಕರಿಸುತ್ತಿರುವ ಬಿ.ಎಸ್.ಯಡಿಯೂರಪ್ಪನವರ ಪ್ರಮಾಣವಚನ ಸಮಾರಂಭ ಸುಸೂತ್ರವಾಗಿ ನಡೆಯಲೆಂದು ರೆಂಜಿಲಾಡಿ ನೂಜಿಬೈಲ್ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


ಸರಕಾರ ರಚನೆಯಲ್ಲಿ ತೊಡಗಿಕೊಂಡಿರುವ ಬಿಜೆಪಿಯು ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸುತ್ತಿರುವ ಬಿ.ಎಸ್.ಯಡಿಯೂರಪ್ಪನವರಿಗೂ ಹಾಗೂ ಮುಂದೆ ನಡೆಯುವ ಬಹುಮತ ಸಾಭೀತುಪಡಿಸುವ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದು ಯಶಸ್ವಿಯಾಗಲೆಂದು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಉಮೇಶ್ ಶೆಟ್ಟಿ ಸಾಯಿರಾಂ ನೇತೃತ್ವದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ದೈವಸ್ಥಾನದ ಅರ್ಚಕ ಕೃಷ್ಣ ಹೆಬ್ಬಾರ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಳೆ, ಪ್ರಮುಖರಾದ ವಿಜಯಕುಮಾರ್ ಕೇಪುಂಜ, ಯಶೋಧರ ಗೌಡ ಮಾರಪ್ಪೆ, ರವಿಪ್ರಸಾದ್ ಕರಿಂಬಿಲ, ಉಮೇಶ್ ಜಾಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Also Read  ವಸತಿಗೃಹದಲ್ಲಿ ನೇಣು ಬಿಗಿದು ಪ್ರೊಫೆಸರ್‌ ಆತ್ಮಹತ್ಯೆ

error: Content is protected !!
Scroll to Top