ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಬೆಂಗಳೂರು ➤ ಅನುಪಯುಕ್ತ ಸಾಮಾಗ್ರಿಗಳ ವಿಲೇವಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಬೆಂಗಳೂರು ಇವರ ಸುತ್ತೋಲೆಯಂತೆ, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಕಚೇರಿಯ, ಅನುಪಯುಕ್ತ ಸಾಮಾಗ್ರಿಗಳ ವಿಲೇವಾರಿ ಸಮಿತಿಯ ಸಭೆಯನ್ನುಆಯೋಜಿಸಲಾಗಿದೆ.

ನಡವಳಿಯಂತೆ ಗುಪ್ತ ಟೆಂಡರ್ ಮೂಲಕ ಎಲ್ಲಿ, ಹೇಗಿದೇಯೋ ಅದೇ ಸ್ಥಿತಿಯಲ್ಲಿ ಲಾಕರ್ಸ್, ಟ್ರಾಲಿ, ಐ.ವಿ.ಸ್ಟ್ಯಾಂಡ್, ಪ್ಲಾಸ್ಟಿಕ್, ಸ್ಟೀಲ್, ಕಬ್ಬಿಣ ಹಾಗೂ ಇತರ ಅನುಪಯುಕ್ತ ಸಾಮಾಗ್ರಿಗಳನ್ನು ವಿಲೇವಾರಿ ಮಾಡಲಾಗುವುದು. ಭರ್ತಿ ಮಾಡಿದ ಟೆಂಡರ್ ಫಾರ್ಮ್‍ಗಳನ್ನು ಆಗಸ್ಟ್ 21 ರಂದು ಮಧ್ಯಾಹ್ನ 4.30 ಗಂಟೆಯ ಒಳಗಾಗಿ ಸಲ್ಲಿಸಬೇಕು. ನಿಗದಿತ ದಿನಾಂಕ ಮತ್ತು ಸಮಯದ ನಂತರ ಟೆಂಡರ್‍ಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ವನಮಹೋತ್ಸವ

error: Content is protected !!
Scroll to Top