ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ➤ ಅಧ್ಯಯನ ವರದಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೆ-ಸ್ಟೆಪ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಜಲಾಮೃತ ಯೋಜನೆಯಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿಶ್ಲೇಷಣಾತ್ಮಕ ಅಧ್ಯಯನ ವರದಿಯನ್ನು ಆಹ್ವಾನಿಸಲಾಗಿದೆ.


ಈ ಸ್ಪಧೆಯಲ್ಲಿ ರಾಜ್ಯದ ಯಾವುದೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ತಮ್ಮ ಊರು, ನಗರದಲ್ಲಿ ಅಥವಾ ಸನಿಹದ ಹಳ್ಳಿ/ಸ್ಥಳೀಯ ಪ್ರಚಲಿತ ನೀರಿಗೆ ಸಂಬಂಧಪಟ್ಟ ಸಮಸ್ಯೆ ಕುರಿತಾಗಿ 4 ಪುಟಗಳಿಗೆ ಮೀರದಂತೆ ವಿಶ್ಲೇಷಣಾತ್ಮಕ ಅಧ್ಯಯನ ವರದಿ(ಸನಿಹದ ನದಿ, ಸರೋವರ, ಬಾವಿ, ಕೆರೆ ಅಥವಾ ಇನ್ಯಾವುದೇ ಜಲಮೂಲಗಳಾಗಿರಬಹುದು) ಯೊಂದನ್ನು ಸಿದ್ಧಪಡಿಸಿ ಸಲ್ಲಿಸಬೇಕು. ವರದಿಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ 2-3 ಛಾಯಾಚಿತ್ರಗಳನ್ನು ಲಗತ್ತಿಸಬಹುದು.

ಸಮಸ್ಯೆಯನ್ನು ಸಮರ್ಪಕವಾಗಿ ಗುರುತಿಸಿ ಎಲ್ಲ ಕೋನಗಳಿಂದ ಅಧ್ಯಯನ ಮಾಡುವುದಲ್ಲದೇ ಸಾಧ್ಯವಿರುವ ಪರಿಹಾರಾತ್ಮಕ ಸಲಹೆಗಳನ್ನು ತಮ್ಮ ವರದಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಸ್ಪರ್ಧೆಯ ಮುಖ್ಯ ಉದ್ದೇಶ ವಿದ್ಯಾರ್ಥಿಯಿಂದ ಸ್ಥಳೀಯವಾಗಿ ನೀರಿನ ಸಮಸ್ಯೆ ಕುರಿತು ವೈಜ್ಞಾನಿಕ ವಿವರಣೆ ಮತ್ತು ವೈಜ್ಞಾನಿಕ ತಳಹದಿಯಲ್ಲಿ ಪರಿಹಾರ ಹುಡುಕುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಸಿದ್ಧಪಡಿಸಿದ ಯೋಜನೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ಗೆ ಇ-ಮೇಲ್ krvp.info@gmail.com ಸಂಪರ್ಕಿಸಬಹುದು.

Also Read  ಪಡುಬಿದ್ರಿ: ಕಡಲ್ಕೊರೆತಕ್ಕೆ ಬೀಚ್ ರಸ್ತೆ ಕುಸಿಯುವ ಭೀತಿ 

ಅಥವಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ನಂ 24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು ಇಲ್ಲಿಗೆ ಅಂಚೆ ಮೂಲಕ ಆಗಸ್ಟ್ 12ರೊಳಗೆ ಕಳುಹಿಸಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-26718939/ 9880917831/ 9483549159 ಸಂಪರ್ಕಿಸಬಹುದು. ಪರಿಣಿತರ ತಂಡವೂ ಸ್ವಂತಿಕೆ ವೈಜ್ಞಾನಿಕ ವಿಶ್ಲೇಷಣೆ ಮತ್ತು ಪರಿಹಾರ ಮಾರ್ಗೋಪಯಾಗಳನ್ನು ಪ್ರತಿ ಜಿಲ್ಲೆಯಿಂದ ಅತ್ಯುತ್ತಮ ಮೂರು ಲೇಖನಗಳನ್ನು ಆಯ್ಕೆ ಮಾಡುತ್ತದೆ, ವಿಜೇತರನ್ನು ರಾಜ್ಯ ಮಟ್ಟದ ಕಾರ್ಯಗಾರಕ್ಕೆ ಆಹ್ವಾನಿಸಲಾಗುವುದು ಎಂದು ವಿಜ್ಷಾನ ಪರಿಷತ್‍ನ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ ಇವರ ಪ್ರಕಟನೆ ತಿಳಿಸಿದೆ.

Also Read  ಆಲಂಕಾರು: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

error: Content is protected !!
Scroll to Top