ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ಮಂಗಳೂರು ನಗರದ ಬಿಜೈ ನಿವಾಸಿ ಸಂದೀಪ್ ಪೌಲ್ (ಪ್ರಾಯ 38 ವರ್ಷ) ಎಂಬವರು ಏಪ್ರಿಲ್ 18 ರಂದು ಕಾಣೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ವ್ಯಕ್ತಿಯ ಚಹರೆ ಇಂತಿವೆ : ಎತ್ತರ 5 ಅಡಿ, ಜಾತಿ ಕ್ರಿಶ್ಚಿಯನ್, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಧರಿಸಿದ್ದ ಬಟ್ಟೆ ಪ್ಯಾಂಟ್ ಮತ್ತು ಟೀ ಶರ್ಟ್, ತಿಳಿದಿರುವ ಭಾಷೆ ಮಲೆಯಾಳಿ, ಇಂಗ್ಲೀಷ್, ಕನ್ನಡ. ಈ ಚಹರೆಯುಳ್ಳ ವ್ಯಕ್ತಿಯ ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು ಮಂಗಳೂರು ಪೂರ್ವ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 2220520, ಅಥವಾ ಜಿಲ್ಲಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 2220800-2220801 ಇಲ್ಲಿಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Also Read  ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸಿದ್ಧ      ಆಹಾರ ಸಚಿವ ಪ್ರಹ್ಲಾದ್ ಜೋಶಿ ಘೋಷಣೆ

 

error: Content is protected !!
Scroll to Top