ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಿತಿ ಸಭೆ : ಎಲ್ಲಾ ಇಲಾಖೆಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ ➤ ಎಸ್ ಸಸಿಕಾಂತ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.20.ಮಕ್ಕಳ ಸಂರಕ್ಷಣೆಯಲ್ಲಿ ಮಕ್ಕಳ ಸಂರಕ್ಷಣಾ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇದ ಹಾಗೂ ಪೋಕ್ಸೋ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಪ್ರತಿ ಇಲಾಖೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಹೇಳಿದರು.


ಗುರುವಾರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು, ಮಕ್ಕಳ ಸಂರಕ್ಷಣೆಯಲ್ಲಿ ವಿವಿಧ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಪ್ರಸ್ತುತ ನೋಂದಾವಣೆಗೊಂಡ 74 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯ, ಮಕ್ಕಳ ಮಾಹಿತಿ ಇತ್ಯಾದಿ ವಿಚಾರಗಳ ಮಾಹಿತಿ ಪಡೆದು ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿದ ಸಂಧಂರ್ಭದಲ್ಲಿ ಮಕ್ಕಳಿಗಾಗಿ ಏನಾದರೂ ವಿನೂತನ ಮಾದರಿಯ ಕಲಿಕಾ ಸಮಾಗ್ರಿಗಳಾಗಲಿ, ಶುಚಿತ್ವಕ್ಕಾಗಿ ಬಳಕೆಯಾಗಿರುವ ಸಾಮಾಗ್ರಿಗಳಾಗಲೀ, ಉತ್ತಮ ಗುಣಮಟ್ಟದ ಆಹಾರ ಪೂರೈಕೆಯಾಗಿರುವ ಒಳ್ಳೆಯ ವಿಚಾರ ಕಂಡು ಬಂದರೆ ಅಂತಹಾ ವಿಚಾರಗಳನ್ನು ಎಲ್ಲಾ ಪಾಲನಾ ಸಂಸ್ಥೆಗಳಲ್ಲಿ ಪಾಲಿಸಿ, ಹೊಸ ವ್ಯವಸ್ಥೆಯನ್ನು ಸೃಷ್ಠಿಸಿಬೇಕು.

ಮಕ್ಕಳ ಸಹಾಯವಾಣಿ ಕುರಿತು ಮಾಹಿತಿಗಾಗಿ ಸಾರ್ವಜನಿಕ ಸ್ಥಳ, ಸಮಾಜ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ, ಶಾಲಾ ಕಾಲೇಜುಗಳಲ್ಲಿ ಮಾಹಿತಿ ಪತ್ರ ಗೋಡೆ ಬರಹ ಮೂಲಕ ಪ್ರಚಾರ ಪಡಿಸಿ ಎಂದು ತಿಳಿಸಿದರು.“ಟ್ರ್ಯಾಕ್ ದ ಚೈಲ್ಡ್” ಪೋರ್ಟಲ್‍ನಲ್ಲಿ ಮಕ್ಕಳ ಮಾಹಿತಿಯನ್ನು ಅಳವಡಿಸುವುದರಿಂದ ಕಾಣೆಯಾಗಿರುವ ಮಕ್ಕಳ ಪೋಷಕರಿಗೆ ಮಕ್ಕಳು ತಲುಪಲು ಸಹಾಯವಾಗುತ್ತದೆ.

Also Read  ವ್ಯಕ್ತಿ ನಾಪತ್ತೆ

ಆದ್ದರಿಂದ ಟ್ರ್ಯಾಕ್ ದ ಚೈಲ್ಡ್ ಪೋರ್ಟಲ್‍ನಲ್ಲಿ ಮಕ್ಕಳ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಿತಿ ಸಭೆಗೆ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕರು ಹಾಗೂ ಬಾಲ ನ್ಯಾಯ ಮಂಡಳಿಯ ಅಭಿಯೋಜಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ 2ನೇ ಹಿರಿಯ ನ್ಯಾಯಾಧೀಶರು ಹಾಗೂ ಮಂಗಳೂರು ಬಾಲಾನ್ಯಾಯದ ಅಧ್ಯಕ್ಷೆ ಎಮ್ ಅನಿತಾ ಅವರು ಮಾತನಾಡುತ್ತಾ. ಈಗಿನ ದಿನಗಳಲ್ಲಿ ಮಕ್ಕಳ ಅಪರಾಧ ಹೆಚ್ಚಾಗುತ್ತಿದ್ದು, ಬಡತನ, ಮಕ್ಕಳಿಗೆ ಮೂಲಭೂತ ಸೌಕರ್ಯ ದೊರಕದೇ ಇರುವುದು ಹಾಗೂ ಬಾಲ್ಯಾವಸ್ಥೆತೆಯಲ್ಲಿ ಬೆಳವಣಿಗೆಗೆ ಪೂರಕ ಅವಶ್ಯಕತೆಗಳು ಮಕ್ಕಳಿಗೆ ದೊರಕದೆ ಇದ್ದಲ್ಲಿ ಅವರ ದೈಹಿಕ/ಮಾನಸಿಕ ಹಾಗೂ ಸಮಗ್ರ ಅಭಿವೃದ್ಧಿಯು ಕುಂಟಿತವಾಗುತ್ತದೆ.

ಪೋಷಕರು ಮಕ್ಕಳಿಗೆ ಸಮಯ ಕೊಡದೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಪೋಷಕರು ಮಕ್ಕಳಿಗೆ ಮೂಲಭೂತ ಅವಶ್ಯಕತೆಯೊಂದಿಗೆ ಪ್ರೀತಿ, ಸಮಯ, ಸಹಕಾರ ಹಾಗೂ ಸರಿಯಾದ ಮಾರ್ಗದರ್ಶನ ನೀಡುವುದರಿಂದ ಮಕ್ಕಳನ್ನು ಸರಿಯಾದ ದಾರಿಯಲ್ಲಿ ದುಶ್ಚಟಗಳಿಗೆ ಬಲಿಯಾಗದಂತೆ ಕಾಪಾಡಬಹುದಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡುವ ಸಂಧರ್ಭದಲ್ಲಿ ಸಾರ್ವಜನಿಕವಾಗಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಮಕ್ಕಳನ್ನು ದತ್ತು ಪಡೆಯುವಂತಾ ಪೋಷಕರು ಮಕ್ಕಳ ಭವಿಷ್ಯವನ್ನು ಯಾವ ರೀತಿಯಲ್ಲಿ ರೂಪಿಸುತ್ತಾರೆ ಎಂದು ಮಾಹಿತಿ ಪಡೆಯುವುದರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ಯಾಮಾಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಉಸ್ಮಾನ್, ಬಾ¯ ನ್ಯಾಯ ಮಂಡಳಿ ಸರಕಾರಿ ಅಭಿಯೋಜಕರು ದೇವೇಂದ್ರ, ಮಕ್ಕಳ ಸಂಸ್ಥೆಯ ನಾಮನಿರ್ದೇಶಿತ ಪ್ರತಿನಿಧಿ ಸಿಸ್ಟರ್ ದುಲ್ಸಿನ್ ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Also Read  ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಗಳಿಗೆ ಅರ್ಜಿ ಆಹ್ವಾನ

error: Content is protected !!
Scroll to Top