ಭಾರತೀಯ ಹವಾಮಾನ ಇಲಾಖೆ ➤ ಸಂದರ್ಶನದ ದಿನ ಬದಲಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.20.ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸೂಚನೆ ಇರುವುದರಿಂದ ಕರ್ನಾಟಕ (ಸರ್ಕಾರಿ)ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ ನಡೆಯಬೇಕಾಗಿದ್ದ ಸಂದರ್ಶನಾ ದಿನಾಂಕವನ್ನು ಬದಲಾವಣೆ ಗೊಳಿಸಲಾಗಿದೆ.

ನಮ್ಮ ಸಂಸ್ಥೆಯಲ್ಲಿ 2019-20ನೇ ಸಾಲಿನ ಪ್ರಥಮ ವರ್ಷಕ್ಕೆ ಆಫ್‍ಲೈನ್ ಮೂಲಕ ನಡೆಯಲಿರುವ ಸಂದರ್ಶನದ ದಿನಾಂಕವನ್ನು, ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಜುಲೈ 20 ರ ಬದಲಾಗಿ ಜುಲೈ 24 ರಂದು ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವುದು ಎಂದು ಪ್ರಾಂಶುಪಾಲರು ಗ್ರೇಡ್-2, ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಬುಲೆಟ್‌ ಟ್ಯಾಂಕರ್.!

error: Content is protected !!
Scroll to Top