ಜವಾಹರ ನವೋದಯ ವಿದ್ಯಾಲಯ ➤ 6ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.20.ಭಾರತ ಸರಕಾರದ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಸಿ.ಬಿ.ಎಸ್.ಇ. ಪಠ್ಯಕ್ರಮ ಆಧಾರಿತ ವಸತಿ ಶಾಲೆಯಾದ ಮುಡಿಪು ಜವಾಹರ ನವೋದಯ ವಿದ್ಯಾಲಯದ 2020-21ನೇ ಸಾಲಿಗೆ ಆರನೇ ತರಗತಿ ಪ್ರವೇಶಾತಿಯ ಆಯ್ಕೆ ಪರೀಕ್ಷೆಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ಸರಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗು ಶಿಕ್ಷಣ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಪಾಲಕ/ಪೋಷಕ ಜೊತೆಗೆ ವಿದ್ಯಾರ್ಥಿಯ 5ನೇ ತರಗತಿ ಓದುತ್ತಿರುವ ಶಾಲೆಯ ಪ್ರಮಾಣಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಂದ ಸಹಿ ಮತ್ತು ಮೊಹರು ಪಡೆದು ಯಾವುದೇ ಇಂಟರ್‍ನೆಟ್ ಕೇಂದ್ರಗಳ ಮೂಲಕ ಅಥವಾ ಜವಾಹರ ನವೋದಯ ಮುಡಿಪು ವಿದ್ಯಾಲಯದ ಹೆಲ್ಪ್‍ಲೈನ್ ಸಹಾಯದಿಂದ ವೆಬ್ ಸೈಟ್ ವಿಳಾಸ www.nvshq.org ಅರ್ಜಿ ಸಲ್ಲಿಸಬಹುದು.

Also Read  ಕಡಬ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಅರ್ಜಿಯೊಂದಿಗೆ ಶಾಲೆಯ ವ್ಯಾಸಂಗ ದೃಢೀಕರಣ ಪತ್ರ, ಮಗುವಿನ ಭಾವಚಿತ್ರ, ಸಹಿ ಮತ್ತು ಹೆತ್ತವರ ಸಹಿಯೊಂದಿಗೆ ಆನ್‍ಲೈನ್ ಕೇಂದ್ರಗಳಿಗೆ ಭೇಟಿ ನೀಡಬೇಕು.ಹೆಚ್ಚಿನ ಮಾಹಿತಿಗಾಗಿ ನವೋದಯ ವಿದ್ಯಾಲಯ ಸಮಿತಿಯ ವೆಬ್‍ಸೈಟ್ www.nvshq.org / www.jnvmangalore.gov.in ನ್ನು ಮತ್ತು ಪ್ರಾಂಶುಪಾಲರು, ಜವಾಹರ ನವೋದಯ ವಿದ್ಯಾಲಯ, ಮುಡಿಪು ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ08255-261300.15, ಸೆಪ್ಟೆಂಬರ್ 2019 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 11, ಜನವರಿ 2020ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಜವಾಹರ ನವೋದಯ ವಿದ್ಯಾಲಯ, ಮುಡಿಪು ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.

error: Content is protected !!
Scroll to Top