ತುಮಕೂರು ಜಿಲ್ಲಾ ಆಸ್ಪತ್ರೆಯ ಡಿ.ಎನ್.ಬಿ. ಶೈಕ್ಷಣಿಕ ಕೇಂದ್ರ ➤ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆಗೆ ಸಂಬಂಧ ಪಟ್ಟಂತೆ ನೇರ ಸಂದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.12.ತುಮಕೂರು ಜಿಲ್ಲಾ ಆಸ್ಪತ್ರೆಯ ಡಿ.ಎನ್.ಬಿ. ಶೈಕ್ಷಣಿಕ ಕೇಂದ್ರದ ವಿವಿಧ ವಿಭಾಗಕ್ಕೆ ಬೋಧನೆ ಮತ್ತು ವಿಭಾಗದಲ್ಲಿನ ಕರ್ತವ್ಯ ನಿರ್ವಹಣೆಗೆ ಜುಲೈ 22 ರಂದು ಬೆಳೆಗ್ಗೆ 11 ಗಂಟೆಯಿಂದ ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ, ಜಿಲ್ಲಾ ಆಸ್ಪತ್ರೆ, ತುಮಕೂರು ಇಲ್ಲಿ ನೇರ ಸಂದರ್ಶನ ನಡೆಯಲಿದೆ.


ಪಿ.ಜಿ ಟೀಚರ್ – 67 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು ಹಾಗೂ ಜೂನಿಯರ್ ಕನ್ಸ್‍ಲ್‍ಟೆಂಟ್‍ಗಳು 45 ವರ್ಷ ವಯೋಮಿತಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಿರಬೇಕು. ಬೋಧನೆ ಜೊತೆ ಹೊರರೋಗಿ, ಒಳರೋಗಿ ಮತ್ತು ವಿಭಾಗದ ಕರ್ತವ್ಯದ ನಿರ್ವಹಣೆ ವಹಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಳನ್ನು ಪಡೆಯಲು ಡಿ.ಎನ್.ಬಿ ಶೈಕ್ಷಣಿಕ ಕೇಂದ್ರ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿ ಕಚೇರಿಯ ವೇಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ಸಂಪರ್ಕಿಸಬಹುದು ಎಂದು ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಬೆಳ್ತಂಗಡಿ: ತಂದೆಯನ್ನೆ ಹತ್ಯೆಗೈದ ಪಾಪಿ ಪುತ್ರ

error: Content is protected !!
Scroll to Top