ಸರಕಾರಿ ಯೋಜನೆಗಳ ಜನಜಾಗೃತಿ ➤ ಗ್ರಾಮ ಸಂಪರ್ಕ ಕಾರ್ಯಕ್ರಮ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.12.ಸರಕಾರದ ಜನಪರ ಯೋಜನೆಗಳ ಕುರಿತು ಸಾಂಸ್ಕøತಿಕ ಕಲೆಗಳ ಮೂಲಕ ಜನ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ವರ್ಷ ಹಮ್ಮಿಕೊಂಡಿರುವ ಗ್ರಾಮ ಸಂಪರ್ಕ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ.


ಖ್ಯಾತ ಯಕ್ಷಗಾನ ಕಲಾವಿದ ಗಿರೀಶ್ ನಾವಡ ನೇತೃತ್ವದ ಕರಾವಳಿ ಜಾನಪದ ಕಲಾವೇದಿಕೆ ಸುರತ್ಕಲ್ ತಂಡದ ಕಲಾವಿದರು ಬೀದಿನಾಟಕಗಳನ್ನು ಹಾಗೂ ಸಂಗೀತ ಕಲಾವಿದ ಮನೋಜ್ ನೇತೃತ್ವದಲ್ಲಿ ಗಣೇಶಪುರ ಶ್ರೀ ಸಿದ್ಧಿವಿನಾಯಕ ತಂಡದ ಕಲಾವಿದರು ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ರೈತ ಬಂಧು-ಕೃಷಿ, ಸಾಲಮನ್ನಾ, ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ, ಬೀದಿ ಬದಿ ವ್ಯಾಪಾರಿಗಳ ಶೋಷಣೆ ತಪ್ಪಿಸಲು ಬಡವರ ಬಂಧು ಕಿರುಸಾಲ ಯೋಜನೆ, ಸ್ವಸಹಾಯ ಗುಂಪುಗಳಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆಯನ್ನು ವೃದ್ಧಿಗೊಳಿಸಲು ಕಾಯಕ ಯೋಜನೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ, ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ, ಎಸ್.ಸಿ.ಎಸ್.ಪಿ.ಟಿ.ಎಸ್.ಪಿ, ಹಿಂದುಳಿದ ವರ್ಗಗಳ ಕಲ್ಯಾಣ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ,ವ ಸತಿ, ಜಲಧಾರೆ ಯೋಜನೆ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ.

Also Read  ಕರಾವಳಿಯಲ್ಲಿ ಮುಂದುವರಿದ ಮಳೆ ➤ ಇಚಿಲಂಪಾಡಿಯಲ್ಲಿ ಮಹಿಳೆಯ ಮನೆ ಸಂಪೂರ್ಣ ನಾಶ

ಜುಲೈ 8 ರಿಂದ  ಆರಂಭಗೊಂಡು  ಈ ಕಾರ್ಯಕ್ರಮ ಜುಲೈ17 ರ ವರೆಗೂ ಜಿಲ್ಲೆಯಾದ್ಯಂತ ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಸರಕಾರದ ಕಾರ್ಯಕ್ರಮಗಳ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆಯಬೇಕೆಂದು ದ.ಕ. ಜಿಲ್ಲಾ ವಾರ್ತಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಹೊಸ್ಮಠ: ಫ್ಯಾನ್ಸಿ ಮತ್ತು ಟೈಲರಿಂಗ್ ಅಂಗಡಿ ಬೆಂಕಿಗಾಹುತಿ ► ಲಕ್ಷಾಂತರ ರೂ. ನಷ್ಟ

error: Content is protected !!
Scroll to Top