ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.12.ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ಹಾಗೂ ಭಾರತ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ಇದರ ನೇತೃತ್ವದಲ್ಲಿ ಯುವ ಸಂಸತ್ 2019ರ ಕಾರ್ಯಕ್ರಮದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವ ಸಂಸತ್ ಕಾರ್ಯಕ್ರಮವು ಜುಲೈ 16 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿರುವುದು.


ಕಾರ್ಯಕ್ರಮದಲ್ಲಿ ಸಂಸತ್ತಿನ ಕಾರ್ಯವಿಧಾನ ಹಾಗೂ ಜವಾಬ್ದಾರಿ ಮತ್ತು ಸರಕಾರದ ಆಡಳಿತ ಅಭಿವೃದ್ಧಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ನೀಡಿ ರಾಜಕೀಯ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ದೇಶದ ಯುವಜನತೆಯನ್ನು ಆರೋಗ್ಯ ಪೂರ್ಣ ರಾಜಕೀಯದತ್ತ ಕೊಂಡೆಯ್ಯುವ ಸಲುವಾಗಿ ತಳಮಟ್ಟದಲ್ಲಿ ಯುವಜನತೆಯನ್ನು ಪ್ರೇರೆಪಿಸುವ ಉದ್ದೇಶವನ್ನು ಹೊಂದಲಾಗಿದೆ.
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿಗಳಾದ ಪೆÇ. ಯಡಪಡಿತ್ತಾಯ ಇವರು ಉದ್ಘಾಟಿಸಲಿರುವರು.. ನೆಹರು ಯುವಕೇಂದ್ರದ ರಾಜ್ಯ ನಿರ್ದೇಶಕ ಅತುಲ್ ನಿಕಮ್, ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯ ದೆಹಲಿಯ ಪ್ರತಿನಿಧಿ ಅಂಕಿತ್ ಜೈಸ್ವಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ನೆಹರು ಯುವಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್‍ಪೇಟೆ ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬದಲ್ಲಿ ಆಗಸ್ಟ್ 27 ಮತ್ತು 28 ರಂದು ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

error: Content is protected !!
Scroll to Top