(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.12.ಪ್ರಸ್ತುತ ಜಿಲ್ಲಾವಾರು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರವನ್ನು ತೆರೆದಿದ್ದು ನಿರುದ್ಯೋಗಿ ಯುವಕ ಹಾಗು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ದೊರಕಿಸುವಲ್ಲಿ ತೊಡಗಿಸಿಕೊಂಡಿದೆ.
ಸದರಿ ಕೇಂದ್ರವು ಎರಡೂವರೆ ವರ್ಷದಿಂದ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತಿದ್ದು, ಈ ಕೇಂದ್ರದಲ್ಲಿ 1186 ಅಭ್ಯರ್ಥಿಗಳು ತರಬೇತಿಯನ್ನು ಮುಗಿಸಿದ್ದು 742 ಅಭ್ಯರ್ಥಿಗಳು ಮಂಗಳೂರು, ಬೆಂಗಳೂರು ಹಾಗು ಮುಂಬೈಯಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ.2019-20ನೇ ಸಾಲಿನ ತರಬೇತಿಗಾಗಿ ಈಗಾಗಲೇ 300 ಕ್ಕೂ ಹೆಚ್ಚಿನ ಅಭ್ಯರ್ಥಿಗಳು ನೊಂದಾಯಿಸಿ ಕೊಂಡಿರುತ್ತಾರೆ. ಇದೀಗ ಸದರಿ ಕೇಂದ್ರದ ವತಿಯಿಂದ ಮೂರನೇ ರೋಜ್ಗಾರ್ ಮೇಳ (ಉದ್ಯೋಗ ಮೇಳ) ವನ್ನು ಜುಲೈ 13 ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ಕಾವೂರು ಜಂಕ್ಷನ್ ಇಲ್ಲಿ ಆಯೋಜಿಸಲಾಗಿದೆ.
ಆದ್ದರಿಂದ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಅಂದು ಬೆಳಿಗ್ಗೆ 9 ರಿಂದ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಮಂಗಳೂರಿನ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಹಾಗು ಜಿಲ್ಲೆಯ ಇತರೆ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಜಿಲ್ಲೆಯ ಎಲ್ಲ ಯುವಕ ಯುವತಿಯರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.ಸುಮಾರು 20ಕ್ಕೂ ಹೆಚ್ಚು ಉದ್ಯೋಗದಾತ ಸಂಸ್ಥೆಗಳು ಭಾಗವಹಿಸುತ್ತಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.