ಪುನರೂರು ➤ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.12.ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಅಂಗ ಸಂಸ್ಥೆಯಾದಂತಹ ಮಂಗಳೂರಿನ ಕಂಕನಾಡಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮುಲ್ಕಿ ಪಂಚಾಯತಿಯ ಪುನರೂರು ಗ್ರಾಮದಲ್ಲಿ ಬುಧವಾರದಂದು ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯನ್ನು ಆಚರಿಸಲಾಯಿತು.


ಕೇಂದ್ರದ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಡಾ|| ಟಿ. ಜೆ. ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮೀನು ಕೃಷಿಕರ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ಎರಡನೇ ವಿಶ್ವಯುಧ್ಧದ ಸಮಯದಲ್ಲಿ ಪೌಷ್ಟಿಕ ಅಹಾರಕ್ಕಾಗಿ ಯೆದುರಿಸಿದ ಸಮಸ್ಯೆಗಳು, ಆಹಾರಪೂರೈಕೆಗಾಗಿ ವಿವಿಧ ಯೊಜನೆಗಳ ಅನುಷ್ಟಾನದ ಹೊರತಾಗಿಯು ಬೇಡಿಕೆ ಇದ್ದ ಆಹಾರವನ್ನು ಪೂರೈಸಲು ಸಾಧ್ಯವಾಗದಿದ್ದಾಗ ಮೀನು ಕೃಷಿಯನ್ನು ಉತ್ತೇಜಿಸಲಾಯಿತು.

 

ಮೀನು ಮರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತಿ ಮಾಡಲು ಪಿಟ್ಟುಟರಿ ಗ್ರಂಥಿಯನ್ನು ಉಪಯೊಗಿಸಿಕೊಂಡು ಪ್ರೇರಿತ ಸಂತಾನೋತ್ಪತ್ತಿ ಪದ್ದತಿಯನ್ನು ಭಾರತೀಯ ಗೆಂಡೆಮೀನುಗಳಲ್ಲಿ ಬಳಸಲಾಯಿತು. ಈ ಪದ್ದತಿಯನ್ನು ಡಾ|| ಹೀರಲಾಲ್ ಚೌಧರಿಯವರು ಯಶಸ್ವಿಗೊಳಿಸಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಮರಿಗಳನ್ನು ಉತ್ಪಾದಿಸಿ ದೇಶದಲ್ಲಿ ನೀಲಿಕ್ರಾಂತಿಗೆ ಕಾರಣವಾದರು. 16ನೇ ಜುಲೈ, 1957 ರಂದು ಈ ಯಶಸ್ಸು ಸಾಧಿಸಿ ಮೀನು ಕೃಷಿಕರಿಗೆ ವರದಾನವಾದುದರಿಂದ ಈ ದಿನವನ್ನು “ರಾಷ್ಟ್ರೀಯ ಮೀನು ಕೃಷಿಕರ ದಿನ”ಎಂದು ಪರಿಗಣಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷರಾದ ಕೇಂದ್ರದ ಮೀನುಗಾರಿಕಾ ವಿಜ್ಞಾನಿ ಡಾ|| ಎನ್. ಚೇತನ್ ಸಮಗ್ರ ಕೃಷಿ ಪದ್ದತಿಯ ಬಗ್ಗೆ ಮಾಹಿತಿ ನೀಡಿದರು.

Also Read  ನವೆಂಬರ್ 13 ರಿಂದ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮ

ಕೃಷಿಕರ ಆದಾಯವನ್ನು ಹೆಚ್ಚಿಸಲು ಸಮಗ್ರ ಕೃಷಿ ಪೂರಕ ಹಾಗು ಕಡಿಮೆ ಪ್ರದೇಶದಲ್ಲಿ ಹಲವು ಬಗೆಯ ಬೆಳೆಗಳನ್ನು ಬೆಳೆಯುವ ಪದ್ದತಿಯಿಂದ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೊಗಿಸಿಕೊಳಲು ಸದ್ಯವಾಗುವುದರೊಂದಿಗೆ ಯಾವುದೇ ಪ್ರದೇಶ ವ್ಯರ್ಥವಾಗದಂತೆ ಬಳಸಿ ಹೆಚ್ಚಿನ ಅದಾಯವನ್ನು ಪಡೆಯಬಹುದಾಗಿದೆ. ಮೀನಿನ ಜೊತೆಗೆ ಕೊಳಿ, ಹಂದಿ, ಜಾನುವಾರು, ಬತ್ತ, ಬಾಳೆ, ತರಕಾರಿ, ವಿವಿಧ ಬಗೆಯ ಹಣ್ಣು, ಹೂವು ಇತ್ಯಾದಿಗಳನ್ನು ಬಳಸಬಹುದಾಗಿದೆ. ಮೀನು ಕೃಷಿಕರ ದಿನಾಚಾರಣೆಯಲ್ಲಿ ವಿವಿಧ ಮಾಹಿತಿಗಳನ್ನು ನೀಡುತ್ತಾ ಕೃಷಿಕರಲ್ಲಿ ಇರುವಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತಾ ಕೇಂದ್ರದ ವಿಜ್ಞಾನಿಗಳು ಸಮಗ್ರ ಕೃಷಿ ಪದ್ದತಿಯನ್ನು ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಬಳಸಿಕೊಳ್ಳುವ ಸಂದೇಶದೊಂದಿಗೆ ಆಚರಿಸಿದರು.

Also Read  ಚಾರ್ಮಾಡಿ ಮಾರ್ಗವಾಗಿ ಮಿನಿ ಬಸ್ ಸಂಚಾರ

error: Content is protected !!
Scroll to Top