ಕರಾಚಿ: ಶೂಟೌಟ್ ಗೆ ಇಬ್ಬರ ಬಲಿ ➤ ಪಾಕಿಸ್ತಾನದ ಟಿವಿ ಚಾನೆಲ್ ನ ಆ್ಯಂಕರ್ ಹಾಗೂ ಆತನ ಗೆಳೆಯ

(ನ್ಯೂಸ್ ಕಡಬ) newskadaba.com ಕರಾಚಿ, ಜುಲೈ.10.ಪಾಕಿಸ್ತಾನದ ಬೋಲ್ ನ್ಯೂಸ್ ಚಾನೆಲ್ ಆ್ಯಂಕರ್ ಮುರೀದ್ ಅಬ್ಬಾಸ್ ಅವರನ್ನು ಖೈಯಾಬಾನ್ ಇ ಬುಖಾರಿ ಪ್ರದೇಶದ ಸಮೀಪದ ಕೆಫೆಯ ಹೊರಭಾಗದಲ್ಲಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಪತ್ರಕರ್ತ ಅಬ್ಬಾಸ್ ಮೇಲೆ ಅತೀಫ್ ಝಮಾನ್ ಎಂಬಾತ ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಬ್ಬಾಸ್ ಗೆಳೆಯ ಖೈಝಾರ್ ಹಯಾತ್ ಅವರ ಮೇಲೂ ಗುಂಡಿನ ದಾಳಿ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಯಾತ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.ತದನಂತರ ಶಂಕಿತ ಗನ್ ಮ್ಯಾನ್ ನನ್ನು ಭದ್ರತಾ ಪಡೆಗಳು ಸೆರೆಹಿಡಿದಿದ್ದು, ಈ ಸಂದರ್ಭದಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ಪರಿಣಾಮ ಪಾಕಿಸ್ತಾನ ಮೂಲದ ಟಿವಿ ಚಾನೆಲ್ ನ ಆ್ಯಂಕರ್ ಅನ್ನು ಗುಂಡಿಟ್ಟು ಹತ್ಯೆಗೈದಿರುವುದಾಗಿ ವರದಿ ಮೂಲಗಳು ತಿಳಿಸಿವೆ.

 

error: Content is protected !!

Join the Group

Join WhatsApp Group