ಸರಸ್ವತೀ ಪ್ರೌಢಶಾಲೆ ಹನುಮಾನ್ನಗರ ಕಡಬ ➤ 6 ವಿದ್ಯಾರ್ಥಿಗಳು NMMS ಸ್ಕಾಲರ್ ಶಿಪ್ ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಸರಸ್ವತೀ ಪ್ರೌಢಶಾಲೆ ಹನುಮಾನ್‍ನಗರ ,ಕಡಬ ಇಲ್ಲಿನ ಹದಿನಾಲ್ಕು ಮಂದಿ ವಿದ್ಯಾರ್ಥಿಗಳು NMMS ಪರೀಕ್ಷೆಯಲ್ಲಿ ಭಾಗವಹಿಸಿದ್ದು 6 ಮಂದಿ ವಿದ್ಯಾರ್ಥಿಗಳು NMMS ಸ್ಕಾಲರ್‍ಶಿಪ್‍ಗೆ ಆಯ್ಕೆಯಾಗಿರುತ್ತಾರೆ.


ಯೂಥ್ ಫಾರ್ ಸೇವಾ ಹಾಗೂ ಸಿಸ್ಕೋ ಸಂಭ್ರಮ ತಂಡದ ಸಹಕಾರದಿಂದ ನೀಡಲಾಗುವ ಸ್ಕಾಲರ್‍ಶಿಪ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಗೀತಾ ಶ್ರೀ ಪಿ, ಜಸ್ಮಿತ್ ಕೆ ಪಿ, ನಿಹಾರ್ ರೈ ಕೆ, ಕೀರ್ತನ್ ರೈ, ಪವನ್ ಕೆ. ಪಿ, ಅಭಿಷೇಕ್ ಕೆ ಇವರು ತಲಾ ರೂ. 2500 ನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟ್ರಮಣ ರಾವ್ ಮಂಕುಡೆಯವರಿಂದ ಪಡೆದುಕೊಂಡರು. ಸ್ಕಾಲರ್‍ಶಿಪ್ ವಿತರಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕರು ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅವಕಾಶಗಳು ದೊರೆಯುತ್ತಿರುವುದು ಸಂತಸದ ಸಂಗತಿ.

Also Read  ಭೀಕರ ಅಪಘಾತ- ತಾಯಿ ಮಗ ಮೃತ್ಯು..! ತಂದೆ- ಮಗಳು ಗಂಭೀರ

ಇಂತಹ ಅವಕಾಶಗಳು ವಿದ್ಯಾರ್ಥಿಗಳ ಕಲಿಕೆಗೆ ಪ್ರೇರಣೆಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀ ಮಾಧವ ಗೌಡ ಕೋಲ್ಪೆ, ಪ್ರೌಢ ವಿಭಾಗದ ಮುಖ್ಯಸ್ಥರಾದ ಶೈಲಶ್ರೀ ರೈ ಎಸ್, ಕಾಲೇಜು ವಿಭಾಗದ ಉಪನ್ಯಾಸಕರಾದ ನಾಗರಾಜ್ ರಾಮಕುಂಜ ಉಪಸ್ಥಿತರಿದ್ದರು.

error: Content is protected !!
Scroll to Top