“ವಿಧ್ವಂಸಕ’ ಕೃತ್ಯಕ್ಕೆ ಸಂಚು ರೂಪಿಸಿದ ಉಗ್ರರು! ➤ ವಿಚಾರಣೆಯ ವೇಳೆ ಮಾಹಿತಿ ನೀಡಿದ ಜೆಎಂಬಿ ಉಗ್ರ ಹಬೀಬುರ್ ರೆಹಮಾನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.9.ಕೆಲ ದಿನಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಬಂಧಿಸಲ್ಪಟ್ಟ ಜೆಎಂಬಿ ಉಗ್ರ ಹಬೀಬುರ್‌ ರೆಹಮಾನ್‌ ಎನ್‌ಐಎ ವಿಚಾರಣೆ ವೇಳೆ ಈ ಮಾಹಿತಿ ಬಾಯ್ಬಿಟ್ಟಿದ್ದಾನೆ.

ಈ ಮಾಹಿತಿ ಆಧರಿಸಿ ಚಿಕ್ಕಬಾಣಾವರದಲ್ಲಿ ತನ್ನ ಮೂವರು ಸಹಚರರೊಂದಿಗೆ ಉಳಿದುಕೊಂಡಿದ್ದ ಬಾಡಿಗೆ ಮನೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿ, ಶೋಧ ನಡೆಸಿದೆ.ಕಾರ್ಯಾಚರಣೆ ವೇಳೆ ದೊರೆತ ಏರ್‌ಗನ್‌, ಟಿಫಿನ್‌ ಬಾಕ್ಸ್‌ ಗ್ರೆನೇಡ್‌ ಸೇರಿ ಇತರ ಸ್ಫೋಟಕಗಳನ್ನು ಜಪ್ತಿ ಮಾಡಿ ಮಹಜರು ಪೂರ್ಣಗೊಳಿಸಿರುವ ಎನ್‌ಐಎ ತಂಡ, ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. 2018ರಲ್ಲಿ ಚಿಕ್ಕಬಾಣಾವರದ ಮನೆಯಲ್ಲಿ ತಂಗಿದ್ದ ಹಬೀಬುರ್‌ ಹಾಗೂ ಆತನ ಮೂವರು ಸಹಚರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.ಆತ ತಂಗಿದ್ದ ಮನೆಯಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

ಈ ಕುರಿತು ತನಿಖೆ ನಡೆಸಬೇಕು ಎಂದು ಎನ್‌ಐಎ ದೂರು ನೀಡಿದೆ. ಈ ನಿಟ್ಟಿನಲ್ಲಿ ಹಬೀಬುರ್‌ ಸೆರಿದಂತೆ ನಾಲ್ವರ ವಿರುದ್ಧ ಉಗ್ರ ಚಟುವಟಿಕೆ ನಿಷೇಧ ಕಾಯಿದೆ ಅನ್ವಯ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು. ಸ್ಥಳೀಯರ ಜತೆ ಹೆಚ್ಚಾಗಿ ಬೆರೆಯದ ನಾಲ್ವರೂ, ಮೊಬೈಲ್‌ ಚಾರ್ಜರ್‌, ಅಲಂಕಾರಿಕ ವಸ್ತುಗಳ ಮಾರಾಟ ಮಾಡುತ್ತಿದ್ದರು. ಹೀಗಾಗಿ ಸ್ಥಳೀಯರಿಗೂ ಅನುಮಾನ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.2018ರ ಜ.19ರಂದು ಬಿಹಾರದ ಕಾಲಚಕ್ರ ಮೈದಾನದಲ್ಲಿ ಬೌದ್ಧಗುರು ದಲೈಲಾಮಾ ಹಾಗೂ ಅಂದಿನ ಬಿಹಾರ ರಾಜ್ಯಪಾಲರ ಉಪಸ್ಥಿತ ಕಾರ್ಯಕ್ರಮದಲ್ಲಿ ಜೆಎಂಬಿ ಉಗ್ರ ಸಂಘಟನೆ ಐಇಡಿ ಸ್ಫೋಟಿಸಿದೆ.ಹಬೀಬುರ್‌ ಮತ್ತು ಆತನ ಸಹಚರರು ವಾಸವಿದ್ದ ಚಿಕ್ಕಬಾಣಾವರದ ಮನೆಯಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಐಇಡಿ ತಯಾರಿಕೆಯಲ್ಲಿ ನಿಪುಣನಾಗಿದ್ದ ಹಬೀಬುರ್‌ ಬೋಧಗಯಾ ಸ್ಫೋಟಕ್ಕೆ ಐಇಡಿ ರವಾನಿಸಿದ್ದನೇ ಎಂಬ ಸಂಶಯ ಮೂಡಿದೆ. ಈ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

 

error: Content is protected !!

Join the Group

Join WhatsApp Group