ಅಮೆರಿಕದ ರಾಜಧಾನಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣ ➤ ಭಾರೀ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಜುಲೈ.9. ಭಾರೀ ಮಳೆಯಿಂದಾಗಿ ನೆರೆ ನೀರಿನಿಂದ ಅಮೆರಿಕದ ರಾಜಧಾನಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಮುಖ ನಗರಗಳು ಮತ್ತು ಶ್ವೇತಭವನದ ಸುತ್ತ ತಗ್ಗು ಪ್ರದೇಶಗಳೆಲ್ಲವೂ ಜಲಾವೃತವಾಗಿದ್ದವು.

ವಾಷಿಂಗ್ಟನ್‌ ಡಿ.ಸಿ. ಸುತ್ತಮುತ್ತ ರಸ್ತೆಗಳಲ್ಲಿ ನೀರು ನಿಂತಿದ್ದು ನೂರಾರು ಕಾರುಗಳು ನೀರಿನಲ್ಲಿ ಮುಳುಗಿವೆ. ಕೆಲ ಕಾರು ಗಳು ಕೊಚ್ಚಿ ಹೋಗಿವೆ.ಕೊಲಂಬಿಯಾ, ವರ್ಜೀನಿಯಾ ಭಾಗಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಲವು ಭಾಗಗಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೆಟ್ರೋ  ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.ರಕ್ಷಣಾ ತಂಡಗಳು ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Also Read  ನಿಮ್ಮ ಕುಟುಂಬದಲ್ಲಿ ಎಂತ ಸಮಸ್ಯೆಗಳಿದ್ದರೂ ಈ ಒಂದು ವಿಧಾನದಿಂದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

 

error: Content is protected !!
Scroll to Top