ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.9.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜುಲೈ 15 ರಿಂದ 27 ರವರೆಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.


ಕ್ಷಯರೋಗದ ಪ್ರಮುಖ ಅಂಶಗಳು ಇಂತಿವೆ: ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಗುಣಪಡಿಸುವುದು. ಟಿಬಿಯು ಶ್ವಾಸಕೋಶಗಳಿಗಷ್ಟೇ ಅಲ್ಲದೆ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು, ರೋಗ ನಿರ್ಣಯಿಸಿದ ಎಲ್ಲಾ ಪ್ರಕರಣಗಳಿಗೆ ಉಚಿತ ಚಿಕಿತ್ಸೆ. ಕಫವನ್ನು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ, ಅಪೂರ್ಣ ಚಿಕಿತ್ಸೆಯು ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಕೊಳಚೆ ಪ್ರದೇಶ, ಹಿಂದುಳಿದವರ್ಗ, ಬೀಡಿ ಕಾರ್ಮಿಕರು, ನೇಕಾರರ ಸಮುದಾಯ, ಹೆಚ್‍ಐವಿ ಸೋಂಕಿತರು, ಮಧುಮೇಹ, ತಂಬಾಕು ಸೇವನೆ ಮಾಡುವವರಿಗೆ ಎರಡು ವಾರಕ್ಕಿಂತಹೆಚ್ಚು ಕೆಮ್ಮು , ಜ್ವರ, ತೂಕ ಕಡಿಮೆಯಾಗುವಿಕೆಮತ್ತು ರಾತ್ರಿ ವೇಳೆ ಬೆವರುವಿಕೆಯ ಲಕ್ಷಣಗಳಿದ್ದಲ್ಲಿ ಕ್ಷಯರೋಗವಿರಬಹುದು.

ಕ್ಷಯ ರೋಗದ ಲಕ್ಷಣವಿದ್ದಲ್ಲಿ ನಿಮ್ಮ ಹತ್ತಿರದ ಸರ್ಕಾರಿಆಸ್ಪತ್ರೆಯಲ್ಲಿ ಕಫ ಹಾಗೂ ಕ್ಷ-ಕಿರಣ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಿ, ಕ್ಷಯರೋಗದ ರೋಗಾಣುವನ್ನು ಕಂಡು ಹಿಡಿಯುವ ಹಾಗೂ ಔಷಧಿಯ ಸೂಕ್ಷ್ಮತೆಯನ್ನು ಸಿಬಿಎನ್‍ಎಎಟಿ ಯಂತ್ರದ ಮೂಲಕ ಪರೀಕ್ಷೆ ಮಾಡಲಾಗುವುದು, ಕ್ಷಯರೋಗವೆಂದು ದೃಡಪಟ್ಟಲ್ಲಿ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಾಟ್ಸ್ ಮುಖಂತರ ಉಚಿತವಾಗಿ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮಾಡಲಾಗುವುದು, ಡಾಟ್ಸ್ ಕ್ಷಯರೋಗಿಗೆ ಚಿಕಿತ್ಸೆಯನ್ನು ನೇರ ನಿಗಾವಣೆ ಮುಖಾಂತರ ನೀಡಲಾಗುವುದು, ಕ್ಷಯರೋಗಿಗೆ ( ಸರ್ಕಾರಿ ಮತ್ತು ಖಾಸಗಿ ) ತಿಂಗಳಿಗೆ ರೂ 500 ನ್ನು ಪೌಷ್ಠಿಕ ಆಹಾರಕ್ಕಾಗಿ ಡಿ.ಬಿ.ಟಿ ಮುಖಾಂತರ ಚಿಕಿತ್ಸೆ ಮುಗಿಯುವವರೆಗೂ ನೇರವಾಗಿ ಖಾತೆಗೆ ಜಮೆ ಮಾಡಲಾಗುವುದು.

Also Read  ಹೃದಯಾಘಾತದಿಂದ ಪತ್ನಿ ಮೃತ್ಯು- ನೊಂದ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ

ಸಕ್ರಿಯ ಕ್ಷಯರೋಗ ಪತ್ತೆಹಚ್ಚುವ ಕಾರ್ಯಕ್ರಮ (ಎ.ಸಿ.ಎಫ್) ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಪ್ರಕರಣ ಇರುವ ಪ್ರದೇಶಗಳ ಮನೆ ಮನೆಗೆ ಭೇಟಿ ನೀಡಿ ಕ್ಷಯ ರೋಗ ಲಕ್ಷಣ ಕಂಡು ಬಂದಲ್ಲಿ ಕಫ ಸಂಗ್ರಹಿಸಿ ತ್ವರಿತವಾಗಿ ಪರೀಕ್ಷೆ ಮಾಡಿಸಿ ಚಿಕಿತ್ಸೆಕೊಡಿಸುವುಸು, ಖಾಸಗಿ ವೈದ್ಯರು ಹಾಗೂ ಔಷಧಿ ವಿತರಕರು ಕ್ಷಯರೋಗವನ್ನು ಪತ್ತೆ ಹಚ್ಚಿ ರೋಗದ ವಿವರವನ್ನು ನೀಡಿದಲ್ಲಿ 500 ರೂಪಾಯಿ ಗೌರವ ಧನವನ್ನು ನೀಡಲಾಗುವುದು ಹಾಗೂ ಖಾಸಗಿ ಚಿಕಿತ್ಸೆ ನೇರಾ ನಿಗವಣೆ ಮುಖಾಂತರ ನೀಡಿದಲ್ಲಿ ಅವರಿಗೆ ಹೆಚ್ಚುವರಿ 500 ರೂಪಾಯಿ ಗೌರವಧನ ನೀಡಲಾಗುವುದು, ನಿಕ್ಷಯ್ ಅಂತರ ಜಾಲದಲ್ಲಿ ರೋಗದ ಪತ್ತೆ ಹಚ್ಚಿದ, ಪರೀಕ್ಷೆಗೆ ಒಳಪಟ್ಟ ಹಾಗೂ ಚಿಕಿತ್ಸೆ ಪೂರ್ಣಗೊಳಿಸಿದ ವಿವರವನ್ನು ನಮೂದಿಸಲಾಗುವುದು ಎಂದು ಜಿಲ್ಲಾಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಕಳೆದು ಹೋಗಿರೋ Voter ID ಮನೆಯಲ್ಲೇ ಕುಳಿತು ಹೀಗೆ ಡೌನ್ಲೋಡ್ ಮಾಡಿ…

error: Content is protected !!
Scroll to Top