ಮಂಗಳೂರು-ಬೆಂಗಳೂರು ಮಳೆಗಾಲದಲ್ಲಿ ರೈಲುಸಂಚಾರ ಕಷ್ಟಕರ➤ಪಶ್ಚಿಮಘಟ್ಟದ ಮೂಲಕ ಹಾದುಹೋಗುವ ರೈಲುಮಾರ್ಗದಲ್ಲಿ ಗುಡ್ಡ ಕುಸಿತ.

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜುಲೈ.8.ಬೆಂಗಳೂರು- ಮಂಗಳೂರು ನಡುವೆ ಪ್ರತೀ ವರ್ಷ ಮಳೆಗಾಲದಲ್ಲಿ ರೈಲು ಸಂಚಾರ ಅನುಮಾನ. ಸಕಲೇಶಪುರ – ಸುಬ್ರಹ್ಮಣ್ಯ ರೈಲು ಮಾರ್ಗದ ಮಧ್ಯೆ ಕಳೆದ ಬಾರಿ ಅತಿವೃಷ್ಟಿ ಸಂದರ್ಭ 65 ಕಡೆ ಭೂಕುಸಿತ ಸಂಭವಿಸಿ ತಿಂಗಳುಗಟ್ಟಲೆ ರೈಲು ಓಡಾಟ ಸ್ಥಗಿತಗೊಂಡಿತ್ತು. ಮಾರ್ಗದ ಎರಡೂ ಕಡೆ ಗುಡ್ಡಗಳು ಈಗಲೂ ಬಾಯ್ದಿರೆದೇ ಇವೆ.

ಹೀಗಾಗಿ ಈ ಬಾರಿಯೂ ಮಳೆ ಜೋರಾದಾಗ ಭೂಕುಸಿತ ಪುನರಾವರ್ತನೆಯಾಗುವ ಸಾಧ್ಯತೆ ಹೆಚ್ಚು.ಈ ರೈಲು ಮಾರ್ಗ ನಿರ್ಮಾಣವಾದ ಬಳಿಕ ಇಷ್ಟು ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರಲಿಲ್ಲ. ಹಳಿ ಮೇಲೆ ಬಿದ್ದ ಮಣ್ಣು ತೆರವು ಮಾಡಿ ಹಳಿಯನ್ನು ಪೂರ್ವ ಸ್ಥಿತಿಗೆ ತರುವುದು ರೈಲ್ವೇ ಇಲಾಖೆಗೆ ದೊಡ್ಡ ಸವಾಲು.ಮಣ್ಣಿನ ಜತೆಗೆ ಬಂಡೆಕಲ್ಲುಗಳು ಬೀಳುವುದರಿಂದ ಹಳಿಗಳು ಸಂಪೂರ್ಣ ನಾಶವಾಗುತ್ತವೆ. ಹಿಟಾಚಿ ಮತ್ತು ಕಾರ್ಮಿಕರ ಸಹಾಯದಿಂದ ತೆರವು, ದುರಸ್ತಿ ನಡೆಸಬೇಕು.

ಸ್ಥಳವು ಇಕ್ಕಟ್ಟಾಗಿದ್ದರೆ, ಅಕ್ಕಪಕ್ಕ ಪ್ರಪಾತಗಳಿದ್ದರೆ ಜಾಗದ ಕೊರತೆಯಿಂದ ಟಿಪ್ಪರ್‌ ಬಳಸಿ ಮಣ್ಣು ಸ್ಥಳಾಂತರಿಸುವುದಕ್ಕೂ ಸಾಧ್ಯವಾಗದು. ಕೆಲಸ ಮಾಡುತ್ತಿರುವಾಗಲೇ ಮತ್ತೆ ಗುಡ್ಡ ಕುಸಿಯುವ ಭೀತಿ. ಮಣ್ಣು ತೆರವು ಮಾಡಿದ ಬಳಿಕ ಹಳಿ ದುರಸ್ತಿಯಾಗಬೇಕು. ಆಮೇಲೆ ಪ್ರಾಯೋಗಿಕ ಸಂಚಾರ ನಡೆಸಿಯೇ ರೈಲು ಸಂಚಾರಕ್ಕೆ ಅಧಿಕಾರಿಗಳು ಅನುಮತಿ ನೀಡುತ್ತಾರೆ.ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಗುಡ್ಡ ಜರಿತ ಕುರಿತು ನಿಗಾ ವಹಿಸಲಾಗುತ್ತಿದೆ. ರಾತ್ರಿ ಹೊತ್ತು ಪೆಟ್ರೋಲ್‌ ಮ್ಯಾನ್‌ ನಿಯೋಜಿಸಲಾಗಿದೆ. ಇಲಾಖೆಯ ತಾಂತ್ರಿಕ ಅಧಿಕಾರಿಗಳು ಮಾರ್ಗದ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಯ ಕುರಿತು ಕಟ್ಟೆಚ್ಚರವಹಿಸುತ್ತಿದ್ದಾರೆ.

 

error: Content is protected !!

Join the Group

Join WhatsApp Group