ವಿಶ್ವವಿದ್ಯಾನಿಲಯ ಮಟ್ಟದ ಆಯ್ಕೆ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದೊಂದಿಗೆ ವಿಶ್ವವಿದ್ಯಾನಿಲಯ ಮಟ್ಟದ ಆಯ್ಕೆ ಶಿಬಿರ ಹಾಗೂ ನಾಯಕತ್ವ ಶಿಬಿರ ನಡೆಯಲಿದೆ.

ಜುಲೈ 10 ರಿಂದ ಜುಲೈ 16 ರವರೆಗೆ ಪುರುಷರ ವಸತಿನಿಲಯ, ಮಂಗಳೂರು ವಿಶ್ವವಿದ್ಯಾನಿಲಯ ಆವರಣ ಮಂಗಳಗಂಗೋತ್ರಿ ಇಲ್ಲಿ ನಡೆಯಲಿದೆ.ಶಿಬಿರದ ಉದ್ಘಾಟನೆ ಜುಲೈ 10 ರಂದು ಸಂಜೆ 3.30 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾ ಪ್ರೊ ಪಿ.ಎಸ್ ಯಡಪಡಿತ್ತಾಯ ನೆರವೇರಿಸಲಿದ್ದಾರೆ.ಸಮಾರೋಪ ಕಾರ್ಯಕ್ರಮ ಜುಲೈ 16 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ ಎ.ಎಂ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Also Read  ಡಿಸ್ಕೌಂಟ್ 'ಸೇಲ್'ನಲ್ಲಿ ಸೀರೆಗಾಗಿ ಮಹಿಳೆಯರ ಭಾರಿ ರಂಪಾಟ..!

error: Content is protected !!
Scroll to Top