ತುಳುಭವನದ ಆವರಣಗೋಡೆ ಕಾಮಗಾರಿಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ತುಳು ಅಕಾಡೆಮಿ ಸ್ಥಾಪನೆಗೊಂಡು 25 ವರ್ಷಗಳನ್ನು ಪೂರೈಸುತ್ತಿರವ ಸಂದರ್ಭದಲ್ಲಿ ಮಂಗಳೂರಿನ ಉರ್ವಸ್ಟೋರ್‍ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಚೇರಿ ಕಟ್ಟಡ ಸಂಕಿರ್ಣದ ಸುತ್ತಲೂ ಭದ್ರತೆಯ ಸಲುವಾಗಿ ಆವರಣಗೋಡೆ ಕಾಮಗಾರಿಗೆ ಜುಲೈ 6 ರಂದು ನೆರವೇರಿತು.

ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜ, ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಹರೀಶ್ ಕುಮಾರ್ ಒಟ್ಟಾಗಿ ಗುದ್ದಲಿ ಪೂಜೆಯ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಅಕಾಡೆಮಿಯ ಅಧ್ಯಕ್ಷ ಎ. ಸಿ. ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ, ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮಹಾಪೌರರಾದ ದಿವಾಕರ್, ಶಶಿಧರ್ ಹೆಗ್ಡೆ ವ್ಮತ್ತಿತರರು ಉಪಸ್ಥಿತರಿದ್ದರು.

Also Read  ಮಕ್ಕಾ ಮಸೀದಿ ಅವಹೇಳನ ಪ್ರಕರಣದಲ್ಲಿ ಅಮಾಯಕ ಯುವಕರ ಫಿಕ್ಸ್ ಆರೋಪ ► ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಕಡಬ ಬಂದ್ ಗೆ ಕರೆ

ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಗಳಾದ ಐವನ್ ಡಿ’ಸೋಜ ಹಾಗೂ ಶಾಸಕರಾದ ವೇದವ್ಯಾಸ ಕಾಮತ್‍ರವರು ಆವರಣಗೋಡೆಯ ಕಾಮಗಾರಿಗಾಗಿ ತಮ್ಮ ಶಾಸಕರ ನಿಧಿಯಿಂದ ತಲಾ 5 ಲಕ್ಷಗಳ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದರು. ವಿಧಾನ ಪರಿಷತ್ತಿನ ಶಾಸಕ ಹರೀಶ್ ಕುಮಾರ್ ಈಗಾಗಲೇ ರೂ 2 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top