ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಫ್ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ, ಸುರತ್ಕಲ್ ಕಚೇರಿಯಲ್ಲಿ ಜುಲೈ 5 ರಂದು ಅಪರಾಹ್ನ 4 ಗಂಟೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಫ್ ತರಬೇತಿ ಕಾರ್ಯಕ್ರಮದ ಉದ್ಟಾಟನಾ ಸಮಾರಂಭ ಜರುಗಿತು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಮಂಗಳೂರು ಇದರ ಅಧ್ಯಕ್ಷ ಅರುಣ್ ಪ್ರಭ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೆ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಅವಕಾಶಗಳು ಇರಲಿಲ್ಲ, ಈ ತರಬೇತಿಯಿಂದ ಬಹಳಷ್ಟು ವಿಷಯಗಳು ವಿದ್ಯಾರ್ಥಿಗಳಿಗೆ ತಿಳಿಯಲ್ಪಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು. ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಮಂಗಳೂರು ಇದಕ್ಕೆ ಪೂರ್ಣ ಸಹಕಾರ ನೀಡಲಿದೆ ಎಂದರು.

Also Read  ಸುಬ್ರಹ್ಮಣ್ಯ: ಇನ್ ಸ್ಟಾಗ್ರಾಂ ಪರಿಚಯ – ಅನ್ಯಕೋಮಿನ ಯುವಕನ ಭೇಟಿಗೆ ಬಂದ ಯುವತಿ ➤ ಯುವಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ..!

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಕಾರ್ಯದರ್ಶಿ ಅನಿಲ್ ಬಾಳಿಗಾ ಉಪಸ್ಥಿತರಿದ್ದರು. ದ.ಕ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಸ್ವಾಗತಿಸಿದರು. ಈ ತರಬೇತಿ ಸಮಾರಂಭಕ್ಕೆ ದ.ಕ. ಜಿಲ್ಲೆಯ 5 ಇಂಜಿನಿಯರಿಂಗ್ ಕಾಲೇಜಿನ ಸುಮಾರು 25 ಮಂದಿ ವಿದ್ಯಾರ್ಥಿಗಳು ಹಾಜರಿದ್ದರು. ಈ ತರಬೇತಿ 3 ವಾರಗಳವರೆಗೆ ನಡೆಯಲಿದ್ದು, ಪ್ರಾಯೋಗಿಕ ಮತ್ತು ಕ್ಷೇತ್ರ ಮಟ್ಟದ ತರಬೇತಿ ನೀಡಲಾಗುವುದು.

error: Content is protected !!
Scroll to Top