ಕಾರ್ಕಳದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಅಂತ್ಯಕ್ರಿಯೆ

  (ನ್ಯೂಸ್ ಕಡಬ) newskadaba.com ಹೆಬ್ರಿ, ಜುಲೈ.6.ಸರಳ ಹಾಗೂ ಉತ್ತಮ ರಾಜಕಾರಣಿ ಕಾರ್ಕಳದ ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಇಂದು ಅಪರಾಹ್ನ ಹುಟ್ಟೂರು ಹೆಬ್ರಿಯ ನಿವಾಸದ ಬಳಿ ನಡೆಯಿತು.

ಪಾರ್ಥಿವ ಶರೀರವನ್ನು ಬೆಳಗ್ಗೆ 10ಕ್ಕೆ ಮಂಗಳೂರಿನಿಂದ ಕಾರ್ಕಳಕ್ಕೆ ತಂದು 12 ಗಂಟೆ ತನಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ತಹಶೀಲ್ದಾರ್‌ ಮಹೇಶ್ಚಂದ್ರ, ಪ್ರಾಂಶುಪಾಲ ಮಂಜುನಾಥ ಉಪಸ್ಥಿತರಿದ್ದರು. ದಾರಿಯುದ್ದಕ್ಕೂ ಸಹಸ್ರಾರು ಅಭಿಮಾನಿಗಳು ದರ್ಶನ ಪಡೆದರು. ಬಳಿಕ ಕಾರ್ಕಳದಿಂದ ಹೆಬ್ರಿಗೆ ಕೊಂಡೊಯ್ಯಲಾಯಿತು. ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಧ್ಯಾಹ್ನ  ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿ ಗಳು ಗೊಂದಲ ಇಲ್ಲದೆ ಅಂತಿಮ ಗೌರವ ಸಲ್ಲಿಸಿದರು. ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

Also Read  ರಾಜ್ಯ ಮಟ್ಟದ ಅಖಿಲ ಭಾರತ ಕನ್ನಡ ಕಾವ್ಯ ಕಮ್ಮಟ – ಅರ್ಜಿ ಆಹ್ವಾನ

 

error: Content is protected !!
Scroll to Top