ಮೀನುಗಾರರು, ಮೀನು ಕೃಷಿಕರಿಂದ ಅರ್ಜಿ ಅಹ್ವಾನ

  (ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಮೀನುಗಾರಿಕೆ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಾದ ವಿವಿಧ ಯೋಜನೆಗಳಿಗೆ ಮೀನುಗಾರರು, ಮೀನು ಕೃಷಿಕರಿಂದ ಅರ್ಜಿ ಅಹ್ವಾನಿಸಲಾಗಿದೆ.

ಮೀನುಮರಿ ವಿತರಣೆ, ಮೀನು ಮಾರಾಟಕ್ಕಾಗಿ ತ್ರಿಚಕ್ರ ಹಾಗೂ ನಾಲ್ಕುಚಕ್ರ ವಾಹನ ಖರೀದಿಗೆ ಸಹಾಯಧನ, ಮೀನುಗಾರಿಕೆ ಬಲೆ, ಸಲಕರಣೆ ಕಿಟ್ ಯೋಜನೆ, ಗಿರಿಜನ ಉಪಯೋಜನೆಯಡಿ ಮೀನು ಮಾರಾಟ ಮಳಿಗೆ ಸ್ಥಾಪನೆಗೆ ಸಹಾಯಧನ, ಮಂಜುಗಡ್ಡೆ ಸ್ಥಾವರಗಳಿಗೆ ವಿದ್ಯುತ್ ಸಹಾಯಧನ, ನೀಲಿಕ್ರಾಂತಿ ಯೋಜನೆಯಡಿ ಮೀನು ಸಾಗಾಟಕ್ಕಾಗಿ ಇನ್ಸುಲೇಟೆಡ್ ಟ್ರಕ್ ಖರೀದಿ, ಸಾಂಪ್ರದಾಯಿಕ ದೋಣಿಗಳ ಮೋಟರೀಕರಣ ಕಾರ್ಯಕ್ರಮ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಅಭಿವೃದ್ಧಿಗೆ ಸಹಾಯ, ಐಸ್‍ಪ್ಲಾಂಟ್ ಮತ್ತು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಗೆ ಸಹಾಯಧನಕ್ಕಾಗಿ ಜುಲೈ 20ರೊಳಗೆ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಅರ್ಹ ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2), ಸೌತ್‍ವಾರ್ಫ್, ಬಂದರು, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದು.

Also Read  ಬೆಳ್ಳಾರೆ: ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಶಾಸಕರಿಗೆ ಮನವಿ

error: Content is protected !!
Scroll to Top