(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ), ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಅಧ್ಯಕ್ಷ/ ಖಜಾಂಚಿ/ ರಾಜ್ಯ ಪರಿಷತ್ ಸದಸ್ಯ ಚುನಾವಣೆಗೆ ನಾಮ ಪತ್ರ ಸಲ್ಲಿಕೆಯ ಅಂತಿಮ ದಿನ ಜುಲೈ 4 ರವರೆಗೆ ಒಟ್ಟು 9 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಹಾಲಿ ಖಜಾಂಚಿ ಯುವಜನ ಸೇವೆ ಮತ್ತು ಗ್ರಂಥಾಲಯ ಇಲಾಖೆ ಪಿ.ಕೆ. ಕೃಷ್ಣ , ಹಾಲಿ ಅಧ್ಯಕ್ಷ ನ್ಯಾಯಾಂಗ ಇಲಾಖೆ ಪ್ರಕಾಶ್ ನಾಯಕ್ , ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಪ್ರದೀಪ್ ಡಿಸೋಜಾ, ಸರಕಾರಿ ಮುದ್ರಣಾಲಯ ಮತ್ತು ಬಂದರು ಇಲಾಖೆ ನಿರಂಜನ ಮೂರ್ತಿ ಇವರು ನಾಮಪತ್ರ ಸಲ್ಲಿಸಿದ್ದಾರೆ.ಖಜಾಂಚಿ ಸ್ಥಾನಕ್ಕೆ ಪಶುಸಂಗೋಪನಾ ಇಲಾಖೆ, ಅಕ್ಷಯ ಭಂಡಾರ್‍ಕರ್, ತಾಂತ್ರಿಕ ಶಿಕ್ಷಣ ಗಿರೀಶ್ ಎಂ. ಕುಂದರ್ ಇವರು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಕಂದಾಯ ಇಲಾಖೆ ಶಿವಾನಂದ ಎಂ, ಪ್ರೌಢಶಾಲೆಗಳು ಶೆರ್ಲಿ ಸುಮಾಲಿನಿ, ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆ ಹೇಮಚಂದ್ರ ಜಿ. ಇವರು ನಾಮ ಪತ್ರ ಸಲ್ಲಿಸಿದ್ದಾರೆ.ಜುಲೈ 6 ಅಂದರೆ ಇಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದ್ದು ಜುಲೈ 11 ರಂದು ಚುನಾವಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.