(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ಕರಾವಳಿಯ ಸಾಂಸ್ಕøತಿಕ, ಸಂಪ್ರದಾಯಿಕ ಚಟುವಟಿಕೆಯನ್ನು ಮುಖ್ಯವಾಗಿ ಇಟ್ಟುಕೊಂಡು ನಡೆಯುತ್ತಿರುವ ಈ ಚಿತ್ರಕಲಾ ಶಿಬಿರವು ತುಂಬಾ ಆದರ್ಶಪ್ರಾಯವಾದದ್ದು ಎಂದು ಆಳ್ವಾಸ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಮೋಹನ ಆಳ್ವಾ ಹೇಳಿದರು.
ಇಂದು ನಡೆದ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಹಾಗೂ ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ, ಬೀದರ, ಮೀನುಗಾರಿಕಾ ಕಾಲೇಜು ಮಂಗಳೂರು ಇದರ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಹಾಗೂ ಕರಾವಳಿ ಚಿತ್ರಕಲಾ ಚಾವಡಿ(ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಮೀನುಗಾರಿಕಾ ವಿಶ್ವವಿದ್ಯಾಲಯ, ಮಂಗಳೂರಿನಲ್ಲಿ ಎರಡು ದಿನಗಳ “ಮತ್ಸ್ಯ ವರ್ಣ ಕಲಾ ಶಿಬಿರ” ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಒಂದು ಚಿತ್ರವು ಒಂದು ಸಾಹಿತ್ಯ ಇದ್ದಹಾಗೆ, ಹೇಗೆ ಸಾಹಿತ್ಯದಲ್ಲಿ ನೂರಾರು ವಿಚಾರಧಾರೆಗಳನ್ನು ಕಾಣುತ್ತೇವೆಯೋ ಅದೇ ರೀತಿಯಾಗಿ ಒಂದು ಚಿತ್ರದಲ್ಲಿ ನೂರಾರು ವಿಚಾರಧಾರೆಯನ್ನು ಕಾಣಬಹುದು, ಸೌಂಧರ್ಯ ಪ್ರಜ್ಞೆ ಉಳ್ಳವನು ದೇಶವನ್ನು ಪ್ರೀತಿಸುತ್ತಾನೆ, ಸಂಸ್ಕøತಿಯನ್ನು ಪ್ರೀತಿಸುತ್ತಾನೆ, ಸಾಮರಸ್ಯದ ಬದುಕನ್ನು ಪ್ರೀತಿಸುತ್ತಾನೆ, ನಮ್ಮ ಕರಾವಳಿಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಜಿಲ್ಲೆ ಆಗಿದೆ.
ಹಾಗಾಗಿ ಈ ಶಿಬಿರದಲ್ಲಿ ಸೇರಿರುವ ಕಲಾವಿದರ ಕುಂಚದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಒಂದು ಒಳ್ಳ್ಳೆಯ ಸೃಜನಶೀಲ ಸಂದೇಶ ರವಾನೆ ಆಗುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೀನುಗಾರಿಕಾ ಕಾಲೇಜು ಡೀನ್ ಆಗಿರುವ ಡಾ. ಕೆ. ಸೆಂಥಿಲ್ ಮಾತನಾಡಿ, ರಾಜ್ಯದ ಪ್ರಸಿದ್ಧ ಚಿತ್ರಕಲಾ ಕಲಾವಿದರ ಕುಂಚದಿಂದ ಕರಾವಳಿಯ ಸಾಂಸ್ಕøತಿಕ ಚಟುವಟಿಕೆಯ ವರ್ಣರಂಜಿತ ಚಿತ್ರಕಲೆಗಳು ಮೂಡಿಬರಲಿದೆ. ಹಾಗಾಗಿ ಇದು ಒಂದು ಒಳ್ಳೆಯ ಅವಕಾಶ ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಂಗಳೂರು ಮೀನುಗಾರಿಕಾ ಕಾಲೇಜಿನ ಮುಖ್ಯಸ್ಥರಾದ ಡಾ. ಶಿವಪ್ರಕಾಶ್, ಕರಾವಳಿ ಚಿತ್ರ ಕಲಾ ಚಾವಡಿ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವಾ ಹಾಗೂ ಚಿತ್ರಕಲಾ ಕಲಾವಿದರು, ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.