(ನ್ಯೂಸ್ ಕಡಬ) newskadaba.com ನವದೆಹಲಿ, ಜುಲೈ.5.ಭಾರತದ ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಕಳೆದ ಕೆಲವು ತಿಂಗಳಿಂದ ಬೆನ್ನುನೋವಿನಿಂದಾಗಿ ವಿಶ್ರಾಂತಿಯಲ್ಲಿದ್ದುದರಿಂದ, 23.65 ಸೆಕೆಂಡ್ಗಳಲ್ಲಿ ಈ ದೂರವನ್ನು ಕ್ರಮಿಸಿ ಮೊದಲಿಗರಾದರು.
ಇದು ಈ ವರ್ಷ ಹಿಮಾ ಪ್ರತಿನಿಧಿಸಿದ ವಿಶ್ವ ಮಟ್ಟದ ಮೊದಲ ಕ್ರೀಡಾಕೂಟ.ಈಕೆ ಪೋಲೆಂಡ್ನಲ್ಲಿ ನಡೆಯುತ್ತಿರುವ ಪೊಜಾ°ನ್ ಆ್ಯತ್ಲೆಟಿಕ್ಸ್ ಗ್ರ್ಯಾನ್ಪ್ರಿ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ವನಿತೆಯರ 200 ಮೀ. ಓಟದಲ್ಲಿ ಅವರು ಈ ಸಾಧನೆ ಮಾಡಿದರು. ಪುರುಷರ ಶಾಟ್ಪುಟ್ ವಿಭಾಗದಲ್ಲಿ ತೇಜಿಂದರ್ ಪಾಲ್ ಸಿಂಗ್ ತೂರ್ 19.62 ಮೀ. ದೂರದ ಸಾಧನೆಗೈದು ಕಂಚಿನ ಪದಕ ಗೆದ್ದರು. ಕಳೆದ ವರ್ಷ ಅವರು 20.75 ಮೀ. ಸಾಧನೆಯೊಂದಿಗೆ ಏಶ್ಯಾಡ್ ಚಿನ್ನ ಜಯಿಸಿದ್ದರು.ಪುರುಷರ 200 ಮೀ. ರೇಸ್ನಲ್ಲಿ ಮುಹಮ್ಮದ್ ಅನಾಸ್ (20.75 ಸೆಕೆಂಡ್ಸ್), 400 ಮೀ. ಓಟದಲ್ಲಿ ಕೆ.ಎಸ್. ಜೀವನ್ (47.25 ಸೆಕೆಂಡ್ಸ್) ಕಂಚಿನ ಪದಕ ಜಯಿಸಿದರು.