(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.5.ದಕ್ಷಿಣ ಕನ್ನಡ ಸಂಸದ ಶ್ರೀ.ನಳಿನ್ ಕುಮಾರ್ ಕಟೀಲ್ ಗುರುವಾರದಂದು ಮಾನ್ಯ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಶ್ರೀ.ವಿ.ಮುರಳೀಧರನ್ವರನ್ನು ಭೇಟಿಯಾದರು.
ಕೆಲ ದಿನಗಳ ಹಿಂದೆ ಮಸ್ಕತ್ ಪೊಲೀಸರಿಂದ ಬಂಧಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ನಿವಾಸಿ ಶ್ರೀ.ಪ್ರಕಾಶ್ ಪೂಜಾರಿ ಇವರನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ಮಧ್ಯಪ್ರವೇಶಿಸಲು ಮಸ್ಕತ್ ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಂಸದರು ಸಚಿವರನ್ನು ವಿನಂತಿಸಿದರು. ಈ ವಿಚಾರವಾಗಿ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು ಕಾನೂನು ತೊಡಕು ನಿವಾರಣೆಯಾದ ತಕ್ಷಣ ಅವರನ್ನು ಸ್ವದೇಶಕ್ಕೆ ಕರೆತರುವ ಭರವಸೆ ನೀಡಿದರು.
ಇದಲ್ಲದೇ ಉದ್ಯೋಗಕ್ಕೆಂದು ಕುವೈಟ್ ಗೆ ತೆರಳಿ ಸಿಲುಕಿಕೊಂಡಿರುವ 73 ಭಾರತೀಯರ ಪೈಕಿ ಸ್ವದೇಶಕ್ಕೆ ಮರಳಲಿಚ್ಚಿಸಿರುವ 13 ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ಹಣಕಾಸಿನ ತೊಡಕಿನಲ್ಲಿರುವ ಇವರಿಗೆ ವಿಮಾನ ಟಿಕೆಟ್ ನ ವ್ಯವಸ್ಥೆ ಮಾಡಿಸಿಕೊಡಲು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಚಿವರನ್ನು ವಿನಂತಿಸಿದರು. ವಿಮಾನ ಟಿಕೆಟ್ ನ ವ್ಯವಸ್ಥೆ ಮಾಡಿಸಿಕೊಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಶಿಲಿಸಲಾಗುವುದು ಎಂದು ಸಚಿವರು ತಿಳಿಸಿದರು.