ಚಿತ್ರಕಲಾವಿದರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.5.2019-20ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಲಲಿತಕಲಾ ಅಕಾಡೆಮಿಯು ನಡೆಸುವ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲು ಆಸಕ್ತ ಚಿತ್ರಕಲಾವಿದರಿಂದ ಅರ್ಜಿಯನ್ನು ಅಕಾಡೆಮಿಯ ನಿಯಮಾನುಸಾರ ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿಯನ್ನು ಜುಲೈ 31 ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002, ಇವರ ವಿಳಾಸಕ್ಕೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿ ಹಾಗೂ ಅಪೂರ್ಣ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ವೆಬ್‍ಸೈಟ್: www.lalitkalakarnataka.org, ಇದನ್ನು ಸಂಪರ್ಕಿಸಲು ಕನ್ನಡ ಮತ್ತು ಸಂಸ್ಸøತಿ ಇಲಾಖೆ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ಸುಳ್ಯ: ಮನೆಗೆ ಬೆಂಕಿಬಿದ್ದು ಯಜಮಾನ ಜೀವಂತ ದಹನ

error: Content is protected !!
Scroll to Top