ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ /ಸೌಹಾರ್ದಾ ಸಹಕಾರ ಸಂಘಗಳ ಕಾಯಿದೆ ➤ ಆ.31 ರೊಳಗೆ ಲೆಕ್ಕಶೋಧನಾ ವರದಿ ಸಲ್ಲಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.4.ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ/ಸೌಹಾರ್ದಾ ಸಹಕಾರ ಸಂಘಗಳ ಕಾಯಿದೆ ಹಾಗೂ ನಿಯಮಗಳನ್ವಯ ಈಗಾಗಲೇ 2018-19ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಆಯ್ಕೆಯಾಗಿರುವ ಸನ್ನದು ಲೆಕ್ಕಪರಿಶೋಧಕರು ತಮಗೆ ಆಯ್ಕೆಯಾಗಿರುವ ಎಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನೆಯನ್ನು ಸಂಬಂಧಪಟ್ಟ ಸಂಸ್ಥೆಯವರಿಗೆ ನೀಡುವಂತೆ ಸೂಚಿಸಲಾಗಿದೆ.

ಆದ್ದರಿಂದ  ಗಸ್ಟ್ 31 ರೊಳಗೆ ಲೆಕ್ಕಪರಿಶೋಧನೆಯನ್ನು ಪೂರೈಸಿ ಲೆಕ್ಕಶೋಧನಾ ವರದಿಯನ್ನು ಸಂಬಂಧಪಟ್ಟ ಸಂಸ್ಥೆಯವರಿಗೆ ಸಲ್ಲಿಸಿ ಒಂದು ಪ್ರತಿಯನ್ನು ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬಹುದು ಎಂದು ಉಪನಿರ್ದೇಶಕರು, ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಪ್ರಕಟಣೆ ತಿಳಿಸಿದೆ.

Also Read  ಎಸ್.ಅಂಗಾರ ಪರ ಸವಣೂರಿನಲ್ಲಿ ಮನೆಮನೆ ಬೇಟಿ

error: Content is protected !!
Scroll to Top