ಸ್ವಚ್ಛ ಭಾರತ ಬೇಸಿಗೆ ಪಾಯೋಜಿತ ಸ್ವಚ್ಛತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.4.ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರ, ಮಂಗಳೂರು ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಭಾರತ ಬೇಸಿಗೆ ಪಾಯೋಜಿತ ಸ್ವಚ್ಛತಾ ಕಾರ್ಯಕ್ರಮ (SBSI 2.0) ವನ್ನು ಯುವಜನರ ಮೂಲಕ ಮಾಡಿಸಲು ನಿರ್ಣಯಿಸಲಾಗಿದೆ.


ಈ ಕಾರ್ಯಕ್ರಮವು ಜೂನ್ 10 ರಿಂದ ಜುಲೈ 31 ರ ವರೆಗೆ ದಿನ ಒಂದಕ್ಕೆ 1 ಗಂಟೆಯಂತೆ 50 ಗಂಟೆಗಳ ಕಾಲ ನಡೆಯಲಿದ್ದು, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡಿರುವ ಯುವ ಮಂಡಳಿಗಳಿಗೂ ಹಾಗೂ ಅದರ ಸದಸ್ಯರು ಪಾಲ್ಗೊಳಬಹುದಾಗಿದೆ. ಗ್ರಾಮೀಣ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ತರಬೇತಿಗಳನ್ನು ಹಮ್ಮಿಕೊಳ್ಳುವುದು. ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಗೆ ಬಗ್ಗೆ ಮಾಹಿತಿ ನೀಡುವುದು.

ಸ್ವಚ್ಛತೆ ಅರಿವು ಮೂಡಿಸುವ ಬೀದಿ ನಾಟಕಗಳನ್ನು ಮಾಡಿಸುವುದು, ಸ್ವಚ್ಛತೆ ಅರಿವು ಮೂಡಿಸುವ ರ್ಯಾಲಿಗಳನ್ನು ಹಮ್ಮಿಕೊಳ್ಳುವುದು, ಸ್ವಚ್ಛತೆ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ನೈರ್ಮಲ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವ ಶೌಚಾಲಯ, ಕೈತೊಳೆಯುವಿಕೆ, ನೈರ್ಮಲ್ಯದ ಅರಿವು ಇತ್ಯಾದಿಗಳನ್ನು ಬಳಸಿಕೊಂಡು ಉತ್ತಮ ನೈರ್ಮಲ್ಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು, ನೈರ್ಮಲ್ಯದ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ಮೂಡಿಸುವುದು.ಘನ ತ್ಯಾಜ್ಯ ನಿರ್ವಹಣೆ ಸಂಬಂಧಿತ ಚಟುವಟಿಕೆಗಳು, ತ್ಯಾಜ್ಯ ಸಂಗ್ರಹಣೆ, ಪ್ರತ್ಯೇಕತೆ, ವಿಲೇವಾರಿ ಮತ್ತು ಮುಕ್ತ ಸ್ವಚ್ಛ ವಾತಾವರಣದ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಹಳ್ಳಿಗಳಲ್ಲಿ ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾಸಮಿತಿಗಳನ್ನು ರಚಿಸುವುದು, ಸಭೆಯಲ್ಲಿ ಭಾಗವಹಿಸುವುದು.

Also Read  ಕಾರಾಗೃಹ ಸಂದರ್ಶಕ ಮಂಡಳಿ ಸದಸ್ಯತ್ವ- ಅರ್ಜಿ ಆಹ್ವಾನ

ಶೌಚಾಲಯ ನಿರ್ಮಿಸುವುದು ಅಥವಾ ನಿರ್ಮಿಸುವಲ್ಲಿ ಸಹಾಯ ಮಾಡುವುದು. ಈ ಎಲ್ಲಾ ಕಾರ್ಯಕ್ರಮಗಳನ್ನು 2019ರ ಜೂನ್ 10 ರಿಂದ ಜುಲೈ 31ರ ವರೆಗೆ 50 ಗಂಟೆಗಳ ಕಾರ್ಯಕ್ರಮ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಇರುವ ಕಾರ್ಯಕ್ರಮಗಳವರದಿ, ಫೋಟೋ, ಪೇಪರ್‍ಕಟ್ಟಿಂಗ್, ವೀಡಿಯೋ, ಕ್ಲಿಪಿಂಗ್‍ಗಳನ್ನು https://NYKS.nic.in/NewsInitiatives/ SwachhBharatInternship ವೆಬ್‍ಸೈಟ್‍ನಲ್ಲ್ಲಿ ಆಯಾ ದಿನದ ಕಾರ್ಯಕ್ರಮಗಳ ವರದಿಯನ್ನು ಕಳುಹಿಸಬೇಕು. ಈ ರೀತಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಹಾಗೂ ಉತ್ತಮ ಕೆಲಸ ನಿರ್ವಹಿಸಿದವರಿಗೆ “ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅದರಂತೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ರೂ. 30,000, ದ್ವಿತೀಯ ರೂ. 20,000 ಹಾಗೂ ತೃತೀಯ ರೂ.10,000 ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನೆಹರು ಯುವಕೇಂದ್ರ, ಕಂದಾಯ ಭವನ, ಜಿಲ್ಲಾಧಿಕಾರಿ ಕಚೇರಿ ಅವರಣ, ಮಂಗಳೂರು. ಅಥವಾ ದೂರವಾಣಿ ಸಂಖ್ಯೆ :- 0824-2422264ನ್ನು ಸಂಪರ್ಕಿಸುವಂತೆ ಜಿಲ್ಲಾ ಸಮನ್ವಯಾಧಿಕಾರಿ, ನೆಹರು ಯುವಕೇಂದ್ರ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ➤ ಪಾದಚಾರಿ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top