ನೀರುಮಾರ್ಗ ಗ್ರಾಮಸಭೆ ಹಾಗೂ ವಾರ್ಡು ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.4.ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರುಮಾರ್ಗ-ಬೊಂಡಂತಿಲ ಗ್ರಾಮದ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಜುಲೈ 11 ರಂದು ಪೂರ್ವಾಹ್ನ 10.30 ಗಂಟೆಗೆ ಸುಬ್ರಹ್ಮಣ್ಯ ಭಜನಾ ಮಂದಿರ ನೀರುಮಾರ್ಗದಲ್ಲಿ ನಡೆಯಲಿದೆ.


ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರುಮಾರ್ಗ, ಬೊಂಡಂತಿಲ ಗ್ರಾಮದ 2019-20ನೇ ಸಾಲಿನಲ್ಲಿ ನಡೆಯುವ ಪ್ರಥಮ ಸುತ್ತಿನ ವಾರ್ಡು ಸಭೆಗಳು ಇಂತಿವೆ; ಬೊಂಡಂತಿಲ ಗ್ರಾಮದ 1 ನೇ ವಾರ್ಡ್ ಸಭೆ ಜುಲೈ 8 ರಂದು ಬೆಳಿಗ್ಗೆ 10.30 ಗಂಟೆಗೆ ಪಡು ಕೊಂಬೆಲಚ್ಚಿಲ್, 2ನೇ ವಾರ್ಡ್ ಸಭೆ ಅಪರಾಹ್ನ 12 ಗಂಟೆಗೆ ಕಾಪೆಟ್ಟು ಅಂಗನವಾಡಿ ಕೇಂದ್ರ, 3 ನೇ ವಾರ್ಡ್ ಸಭೆ ಅಪರಾಹ್ನ 2.30 ಗಂಟೆಗೆ ರೊಟರಿ ಗ್ರಾಮದಳ ತಾರಿಗುಡ್ಡೆ, 4 ನೇ ವಾರ್ಡ್ ಸಭೆ ಸಂಜೆ 4 ಗಂಟೆಗೆ ಅಂಗನವಾಡಿ ಕೇಂದ್ರ ಬಳಿ ನೀರಾಲ, ನೀರುಮಾರ್ಗ ಗ್ರಾಮದ 1 ನೇ ವಾರ್ಡ್ ಸಭೆ ಜುಲೈ 9 ರಂದು ಬೆಳಿಗ್ಗೆ 10.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಪೆದಮಲೆ, 2 ನೇ ವಾರ್ಡ್ ಸಭೆ ಅಪರಾಹ್ನ 12 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನ, 3 ನೇ ವಾರ್ಡ್ ಸಭೆ ಅಪರಾಹ್ನ 2.00 ಗಂಟೆಗೆ ಮಾಣೂರು ದೇವಸ್ಥಾನದ ಬಳಿ, 4, 5 ನೇ ವಾರ್ಡ್ ಸಭೆ ಅಪರಾಹ್ನ 3 ಗಂಟೆಗೆ ಪ್ರಿಯದರ್ಶಿನಿ ಕ್ಲಬ್ ಓಂಟೆಮಾರ್, 6 ನೇ ವಾರ್ಡು ಸಭೆ ಸಂಜೆ 4 ಗಂಟೆಗೆ ಭಂಡಸಾಲೆ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು- ಇಂದೇ ಅರ್ಜಿ ಸಲ್ಲಿಸಿ

error: Content is protected !!
Scroll to Top