ಗ್ಯಾಸ್ ಟ್ಯಾಂಕರ್ ಪಲ್ಟಿ

(ನ್ಯೂಸ್ ಕಡಬ) newskadaba.com ಉಡುಪಿ, ಜುಲೈ.3.ಗ್ಯಾಸ್‌ಟ್ಯಾಂಕರ್‌ ಒಂದು ಮಂಗಳೂರಿನಿಂದ ಕಾರವಾರದತ್ತ ತೆರಳುತ್ತಿದ್ದ ವೇಳೆ  ಪಲ್ಟಿಯಾಗಿದ್ದು, ಆತಂಕಕ್ಕೆ ಕಾರಣವಾಯಿತು.

ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ರ ಬಲಾಯಿಪಾದೆ ಎಂಬಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಹೆದ್ದಾರಿಯಲ್ಲಿ ಸಂಚಾರವನ್ನು ತಡೆಯಲಾಗಿದ್ದು , ಗ್ಯಾಸ್‌ ಲೀಕ್‌ ಆಗುತ್ತಿಲ್ಲ ಎನ್ನುವುದು ಖಚಿತವಾದ ಬಳಿಕ ಇನ್ನೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.ಅಗ್ನಿ ಶಾಮಕದಳ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಗ್ಯಾಸ್‌ ಟ್ಯಾಂಕರ್‌ ತೆರವುಗೊಳಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉದ್ಯಾವರ ಬಂಕ್‌ನಲ್ಲಿ ಡಿಸೇಲ್‌ ತುಂಬಿಸಿ ಹೋದ ಚಾಲಕ ಎಟಿಎಂ ಕಾರ್ಡ್‌ ಬಿಟ್ಟು ಹೋಗಿದ್ದು, ಸ್ವಲ ದೂರ ಹೋಗಿ ತರಾತುರಿಯಲ್ಲಿ ಟ್ಯಾಂಕರನ್ನು ತಿರುಗಿಸುವ ವೇಳೆ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

Also Read  ಸಂಧ್ಯಾ ಕಾಲೇಜಿನಲ್ಲಿ ಬಿ.ಎ. (HEJ), ಬಿ.ಕಾಂ., ಬಿ.ಸಿ.ಎ. ತರಗತಿಗಳಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಅರ್ಜಿ ಆಹ್ವಾನ

error: Content is protected !!
Scroll to Top