ಮುನ್ನೂರು ಗ್ರಾಮಸಭೆ ಹಾಗೂ ವಾರ್ಡು ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.3.ಮಂಗಳೂರು ತಾಲೂಕು ಮುನ್ನೂರು ಗ್ರಾಮದ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಜುಲೈ 12 ರಂದು ಪೂರ್ವಾಹ್ನ 10.30 ಗಂಟೆಗೆ ಸಮುದಾಯ ಭವನ ಸುಭಾಸ್ ನಗರದಲ್ಲಿ ನಡೆಯಲಿದೆ.


ಮುನ್ನೂರು ಗ್ರಾಮದ 2019-20ನೇ ಸಾಲಿನಲ್ಲಿ ನಡೆಯುವ ಪ್ರಥಮ ಸುತ್ತಿನ ವಾರ್ಡು ಸಭೆಗಳು ಇಂತಿವೆ; 1 ನೇ ವಾರ್ಡ್ ಸಭೆ ಜುಲೈ 3 ರಂದು ಬೆಳಿಗ್ಗೆ 10.30 ಗಂಟೆಗೆ ಸೈಂಟ್ ಅಂತೋನಿ ಕ್ಲಬ್ ಸೋಮನಾಥ ಉಳಿಯ, 2 ನೇ ವಾರ್ಡ್ ಸಭೆ ಅಪರಾಹ್ನ 12 ಗಂಟೆಗೆ ಕೃಷ್ಣ ಕೋಡಿ ಅಂಗನವಾಡಿ ಕೇಂದ್ರ, 3 ನೇ ವಾರ್ಡ್ ಸಭೆ ಅಪರಾಹ್ನ 3 ಗಂಟೆಗೆ ಸುಭಾಶ್ ನಗರ ಅಂಗನವಾಡಿ ಕೇಂದ್ರ, 4 ನೇ ವಾರ್ಡ್ ಸಭೆ ಜುಲೈ 4 ರಂದು ಅಪರಾಹ್ನ 12 ಗಂಟೆಗೆ ತೇವುಲ ಅಂಗನವಾಡಿ ಕೇಂದ್ರ, 5 ನೇ ವಾರ್ಡ್ ಸಭೆ ಅಪರಾಹ್ನ 3 ಗಂಟೆಗೆ ಮದನ ನಗರ ಅಂಗನವಾಡಿ ಕೇಂದ್ರ, 6 ನೇ ವಾರ್ಡ್ ಸಭೆ ಜುಲೈ 5 ರಂದು ಬೆಳಿಗ್ಗೆ 10.30 ಗಂಟೆಗೆ ಕುತ್ತಾರು ಪದವು ಶಾಲೆ, 7 ನೇ ವಾರ್ಡ್ ಸಭೆ ಸಂಜೆ 4 ಗಂಟೆಗೆ ಸಂತೋಷ ನಗರ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಚಾರ್ವಕ: ತೋಟದಲ್ಲಿ ಅಡಿಕೆ ಹೊಂಡಕ್ಕೆ ಬಿದ್ದು ವ್ಯಕ್ತಿ ಮೃತ್ಯು

error: Content is protected !!
Scroll to Top