ಜಿಲ್ಲಾ ಆಯುಷ್ ಕಚೇರಿಯಲ್ಲಿ ವೈದ್ಯರ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.2.ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಂಘ ಹಾಗೂ ಜಿಲ್ಲಾ ಆಯುಷ್ ಕಛೇರಿ ವತಿಯಿಂದ ಲಾಲ್‍ಬಾಗ್‍ನಲ್ಲಿರುವ ಜಿಲ್ಲಾ ಆಯುಷ್ ಕಛೇರಿಯಲ್ಲಿ ಜುಲೈ 1 ರಂದು ವೈದ್ಯರ ದಿನಾಚರಣೆ ಹಮ್ಮಿಕೊಳ್ಳಲಾಯಿತು.


ಜಿಲ್ಲಾ ಆಯುಷ್ ಅಧಿಕಾರಿ ಡಾ ಮಹಮದ್ ಇಕ್ಬಾಲ್, ಡಾ ಬಿದಾನ್ ಚಂದ್ರರಾಯ್ ರವರು ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಬಗ್ಗೆ ಗುಣಗಾನ ಮಾಡಿದರು. ಸಮಾಜಮುಖಿ ಮನೋಭಾವದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಆಯುಷ್ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ಆಯುಷ್ ವತಿಯಿಂದ ಇಂತಹ ವೈದ್ಯರಿಗೆ ಸರ್ವರೀತಿಯ ಸಹಕಾರ ನೀಡಲಾಗುತ್ತಿದೆ ಎಂದರು. ಈ ಸಂಧರ್ಭದಲ್ಲಿ ಇಲಾಖೆಯ ಶುಶ್ರೂಷಕಿಯಾದ ಮೋಹಿನಿ.ಸಿ.ಹೆಚ್. ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಜಿಲ್ಲಾ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಡಾ ಮಣಿಕರ್ಣಿಕ ಸ್ವಾಗತಿಸಿದರು. ಕಾರ್ಯದರ್ಶಿ ಡಾ ಮಹಮದ್ ಅಶ್ಫಕ್ ಹುಸೇನ್ ವಂದಿಸಿದರು.

Also Read  ವೃದ್ದನೋರ್ವನನ್ನು ವಿಚಾರಣೆ ನೆಪದಲ್ಲಿ ವಿನಾಕಾರಣ ಅಲೆದಾಡಿಸಿದ ಪೊಲೀಸ್ ಸಿಬ್ಬಂದಿಗಳು ➤ಪೊಲೀಸರ ವರ್ತನೆಯಿಂದ ಬೇಸರ ವ್ಯಕ್ತಪಡಿಸಿದ ವೃದ್ದ 

error: Content is protected !!
Scroll to Top