“ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-KISAN)”

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.2.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-KISAN)” ಯೋಜನೆಯು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಘೋಷಣೆಯನ್ನು ಸಲ್ಲಿಸಿ, ಸದರಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.


ಮೂರು ಕಂತುಗಳಲ್ಲಿ ರೂ.2000/-ದಂತೆ ಒಟ್ಟು ರೂ.6000/- ರೈತರ ಖಾತೆಗೆ ಜಮೆ. ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಅಟಲ್ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಳ್ಳುವುದು. ಅನರ್ಹ ರೈತರು – ಮಂತ್ರಿ/ರಾಜ್ಯದ ಮಂತ್ರಿಸ್ಥಾನ/ಲೋಕಸಭಾ ಸದಸ್ಯತ್ವ/ರಾಜ್ಯಸಭೆ/ರಾಜ್ಯ ಶಾಸಕಾಂಗ ಸಭೆಯ/ಪರಿಷತ್ತಿನ ಸದಸ್ಯತ್ವ ಅಥವಾ ಮುನ್ಸಿಪಾಲಟಿ, ಕಾರ್ಪೋರೇಷನ್ ಮೇಯರ್/ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರು, ರಾಜ್ಯ ಸರ್ಕಾರ/ಕೇಂದ್ರ ಸರ್ಕಾರದ ಮಂತ್ರಾಲಯ/ಕಚೇರಿಗಳು/ಇಲಾಖೆಗಳು ಹಾಗೂ ಅವುಗಳ ಕ್ಷೇತ್ರ ಮಟ್ಟದ ಘಟಕಗಳು.

Also Read  ಅರಣ್ಯ ಉಳಿಸಬೇಕೆಂದು ತೋಟಗಳನ್ನು ನಾಶ ಮಾಡಿದ ಅರಣ್ಯಾಧಿಕಾರಿಗಳು

ಅಥವಾ ಕೇಂದ್ರ/ರಾಜ್ಯ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳ ಹಾಗೂ ಸರ್ಕಾರದ ಅಧೀನದಲ್ಲಿ ಬರುವ ಕಚೇರಿಗಳು/ಸ್ವಾಯತ್ತ ಸಂಸ್ಥೆಗಳ ಹಾಲಿ ಅಥವಾ ನಿವೃತ್ತ್ತ ಗ್ರೂಪ್ ಸಿ ಮತ್ತು ಮೇಲ್ಪಟ್ಟ ನೌಕರರು ಮಾಹೆಯಾನ ರೂ. 10,000/- ಅಥವಾ ಹೆಚ್ಚಿನ ಪಿಂಚಣಿ ಪಡೆಯುವವರು ಯೋಜನೆಯ ಲಾಭ ಪಡೆಯಬಹುದಾಗಿದೆ.ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಅಟಲ್ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಲ್ಲಿ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು, ದ.ಕ ಜಿಲ್ಲೆ , ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top