ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದೆ ಪರದಾಡುತ್ತಿರುವ ಗಡಿ ಗ್ರಾಮಗಳು

(ನ್ಯೂಸ್ ಕಡಬ) newskadaba.com ಜಾಲ್ಸೂರು, ಜುಲೈ.1. ಈ ಗ್ರಾಮದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ತೆರೆಯಬೇಕೆನ್ನುವ ಕೂಗು 15 ವರ್ಷಗಳಿಂದ ಇದ್ದರೂ ಜನರ ಬೇಡಿಕೆ ಇನ್ನೂ ಈಡೇರಿಲ್ಲ.ಮೈಸೂರು-ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಲ್ಸೂರು ಗ್ರಾಮದಲ್ಲಿ ಸುಮಾರು 1,352 ಮನೆಗಳಿವೆ. 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ ಒಟ್ಟು 6,642 ಜನಸಂಖ್ಯೆ ಇದೆ.ಕೇರಳ- ಕರ್ನಾಟಕ ಗಡಿಭಾಗದ ಊರುಗಳ ಪ್ರಮುಖ ಪೇಟೆ ಜಾಲ್ಸೂರು.

ಸರಕಾರಿ ಶಾಲೆ, ಬ್ಯಾಂಕ್‌, ಪೆಟ್ರೋಲ್ ಬಂಕ್‌, ಫ್ಯಾಕ್ಟರಿಗಳು ಎಲ್ಲವೂ ಇಲ್ಲಿವೆ. ಗ್ರಾಮದ ಮುಖ್ಯ ಪೇಟೆಯಾಗಿ ಬೆಳೆಯುತ್ತಿರುವ ಜಾಲ್ಸೂರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇಲ್ಲ. ಗ್ರಾಮಸ್ಥರಿಗೆ ಸರಕಾರಿ ವೈದ್ಯಕೀಯ ಸೌಲಭ್ಯ ಮರೀಚಿಕೆಯಾಗಿದೆ.ಜಾಲ್ಸೂರು- ಕನಕಮಜಲು ಭಾಗದವರಿಗೆ ತುರ್ತು ಸಂದರ್ಭ ಪ್ರಥಮ ಚಿಕಿತ್ಸೆ ಸಿಗುವುದಿಲ್ಲ. ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಇದ್ದಾರೆ. ಆದರೆ ತೀವ್ರತರದ ಅನಾರೋಗ್ಯಕ್ಕೆ ತುತ್ತಾದರೆ ಸುಳ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಿದೆ. ಜಾಲ್ಸೂರಿಂದ ಸುಳ್ಯಕ್ಕೆ 8 ಕಿ.ಮೀ. ದೂರವಿದೆ. ಅಲ್ಲಿ ಟೋಕನ್‌ ಪಡೆದು ಕಾಯಬೇಕಾಗುತ್ತದೆ.

Also Read  ಶಕ್ತಿ ಶಿಕ್ಷಣ ಸಂಸ್ಥೆಯ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಗ್ರಾಮೀಣ ಭಾಗದಲ್ಲಿ ಕಿರಿಯ ಆರೋಗ್ಯ ಉಪಕೇಂದ್ರಗಳು ವ್ಯವಹರಿಸುತ್ತಿದ್ದರೂ ಚಿಕಿತ್ಸೆಗೆ ಸೂಕ್ತ ವೈದ್ಯರಿಲ್ಲ.ಗಡಿಗ್ರಾಮಗಳಾದ ಮಂಡೆಕೋಲು- ಅಜ್ಜಾವರ ಭಾಗಗಳ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಕಲ್ಲಡ್ಕದಲ್ಲಿ ಒಂದು ಕಿರಿಯ ಆರೋಗ್ಯ ಉಪಕೇಂದ್ರವಿದ್ದರೂ ಉಪಯೋಗ ಶೂನ್ಯವಾಗಿದೆ. ಪ್ರತಿ ಮಂಗಳವಾರ ಬರುವ ಆರೋಗ್ಯ ವೈದ್ಯಾಧಿಕಾರಿಗಳ ಭೇಟಿ ಹೊರತುಪಡಿಸಿದರೆ, ಈ ಭಾಗದ ಜನರಿಗೆ ಸುಳ್ಯ ಸರಕಾರಿ ಆಸ್ಪತ್ರೆಯೇ ಗತಿ. ಗಡಿಭಾಗದ ಹೆಚ್ಚಿನ ಗ್ರಾಮಸ್ಥರು ಖಾಸಗಿ ವೈದ್ಯರು ಹಾಗೂ ಕ್ಲಿನಿಕ್‌ಗಳನ್ನು ಅವಲಂಬಿಸಿದ್ದಾರೆ. ಸುಳ್ಯಕ್ಕೆ ಹೋಗುವಷ್ಟು ಸಮಯ ಇಲ್ಲದಿದ್ದರೆ ಖಾಸಗಿ ವೈದ್ಯರ ಮೊರೆ ಹೋಗುತ್ತಾರೆ.

ಕನಕಮಜಲಿನವರು ಜಾಲ್ಸೂರಿಗೆ, ಮಂಡೆಕೋಲು ಭಾಗದವರು ಅಜ್ಜಾವರಕ್ಕೂ ಹೋಗುತ್ತಾರೆ.ಜಾಲ್ಸೂರು ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು ಎನ್ನುವುದರ ಬಗ್ಗೆ ಜಾಲ್ಸೂರು ಗ್ರಾ.ಪಂ. ಗ್ರಾಮಸಭೆಯಲ್ಲಿ ಪ್ರಸ್ತಾವವಾಗಿತ್ತು. ಈ ಭಾಗದಲ್ಲಿ ಎರಡೂ ಗ್ರಾಮಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಬಹುದು. ಇಲ್ಲಿನ ಪ್ರದೇಶಗಳು ಕಾಡಿನಿಂದ ಕೂಡಿದ್ದು, ಆನೆ, ಚಿರತೆ ಹಾವಳಿ ಜಾಸ್ತಿ. ಅಜ್ಜಾವರ ಭಾಗದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬಹುದು ಎನ್ನುವ ಬೇಡಿಕೆ ವ್ಯಕ್ತವಾಗಿದೆ.15 ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸುವ ಬಗ್ಗೆ ಬೇಡಿಕೆಯಿಟ್ಟಿದ್ದೇವೆ. ಕಾಯಿಲೆಗೆ ತುತ್ತಾದರೆ ಸುಳ್ಯಕ್ಕೆ ತೆರಳಬೇಕು. ತುಂಬಾ ಕಷ್ಟ. ಆಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಟೋಕನ್‌ ತೆಗೆದು ಸಾಲಲ್ಲಿ ಕಾಯಬೇಕು. ಖಾಸಗಿ ವೈದ್ಯರ ಅವಲಂಬನೆ ಅನಿವಾರ್ಯವಾಗಿದೆ. ಬಡವರಿಗೆ ಅದು ಅಸಾಧ್ಯ. ಆದಷ್ಟು ಬೇಗ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದರೆ ಗ್ರಾಮಸ್ಥರಿಗೆ ಪ್ರಯೋಜನವಾಗುತ್ತದೆ.

Also Read  ವಿಟ್ಲ: ಎಸ್ಡಿಪಿಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣ ಖಂಡಿಸಿ ಪ್ರತಿಭಟನೆ

error: Content is protected !!
Scroll to Top