ಸಾರಥಿ ಇಲ್ಲದ ಜೆಡಿಎಸ್ ಮಹಿಳಾ ಘಟಕಕ್ಕೆ ➤ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಮಹಿಳಾ ಘಟಕಕ್ಕೆ ಸಾರಥಿ ಇಲ್ಲದೆ 2018ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆಯ ರಥವನ್ನು ಜೆಡಿಎಸ್ ಎಳೆದದ್ದು ಇತಿಹಾಸ. ಸುಮಾರು 18 ತಿಂಗಳ ತರುವಾಯ ಜೆಡಿಎಸ್ ಮಹಿಳಾ ಘಟಕಕ್ಕೆ ಸಾರಥಿ ನೇಮಕ ಮಾಡಲಾಗಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಮೀಸಲಾತಿ ಕಲ್ಪಿಸಿಕೊಟ್ಟ ಜೆಡಿಎಸ್ ಮಹಿಳಾ ಘಟಕಕ್ಕೆ 18 ತಿಂಗಳಿಂದ ಅಧ್ಯಕ್ಷರೇ ಇರಲಿಲ್ಲ. ಮಧ್ಯಂತರ ಚುನಾವಣೆ ಗುಮ್ಮಹರಿಬಿಟ್ಟ ದೇವೇಗೌಡರು ಈಗ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದಾರೆ. ತತ್ಪರಿಣಾಮವಾಗಿ ಜೆಡಿಎಸ್ ಎಲ್ಲ ಘಟಕಗಳನ್ನು ಪುನಾರಚಿಸುತ್ತಿದ್ದು. ಒಂದೂವರೆ ವರ್ಷದಿಂದ ಅಧ್ಯಕ್ಷರಿಲ್ಲದ ಮಹಿಳಾ ಘಟಕಕ್ಕೆ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Also Read  ನೀರಿನಲ್ಲಿ ಮುಳುಗುತ್ತಿದ್ದ ಮಗನ ರಕ್ಷಣೆಗೆ ಹೋದ ತಾಯಿ ನೀರುಪಾಲು..!

ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಪಹರಣದಲ್ಲಿ ಭಾಗಿಯಾದ ಆರೋಪದ ಮೇಲೆ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅರ್ಷಿಯಾ ಆಲಿ ಬಂಧನದಿಂದ ತೆರವಾಗಿದ್ದ ಹುದ್ದೆಗೆ ಇದುವರೆಗೆ ಯಾರನ್ನೂ ನೇಮಕ ಮಾಡಿರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಮಹಿಳಾ ಘಟಕಗಳು ಹೆಚ್ಚು ಕ್ರಿಯಾಶೀಲವಾಗಿರುವುದನ್ನು ಗಮನಿಸಿದ ದೇವೇಗೌಡರು ಈಗ ಮಹಿಳಾ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಲೀಲಾದೇವಿ ಆರ್.ಪ್ರಸಾದ್ ಮತ್ತು ಬೆಂಗಳೂರು ನಗರ ಘಟಕದ ಅಧ್ಯಕ್ಷರಾಗಿ ರುತ್ ಮನೋರಮ ಅವರನ್ನು ನೇಮಕ ಮಾಡಿದ್ದಾರೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಲೀಲಾದೇವಿ ಆರ್.ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.

error: Content is protected !!
Scroll to Top