ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕಾರ್ಯಕರ್ತರ ಒತ್ತಾಯ ➤ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತಬ್ಬಿಬ್ಬು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಭಾನುವಾರ ಜೆ.ಪಿ ಭವನದಲ್ಲಿ ನಡೆದ ಬೆಂಗಳೂರು ನಗರ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಎದುರೇ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಸರ್ಕಾರ ಬಂದು ವರ್ಷವಾಗಿದೆ.

ನಿಗಮ-ಮಂಡಳಿ ಸ್ಥಾನ ಏಕೆ ಭರ್ತಿ ಮಾಡಿಲ್ಲ? ಶಾಸಕರಿಗೆ ನಿಗಮ-ಮಂಡಳಿ ಕೊಡುತ್ತಿದ್ದೀರಿ. ನಾವು ಪಕ್ಷಕ್ಕೆ ದುಡಿದಿಲ್ಲವೇ? ನಮಗೂ ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕೆಲವರು ಒತ್ತಾಯಿಸಿದ್ದಕ್ಕೆ ದೇವೇಗೌಡರು ಒಂದು ಕ್ಷಣ ತಬ್ಬಿಬ್ಬಾದರು. ಕಾರ್ಯಕರ್ತರ ಆಕ್ರೋಶಕ್ಕೆ ಉತ್ತರಿಸಲಾಗದೆ ಸುಮ್ಮನೆ ಕುಳಿತರು. ಕೊನೆಗೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಶಾಸಕ ಗೋಪಾಲಯ್ಯ ಮತ್ತು ನಗರ ಘಟಕ ಅಧ್ಯಕ್ಷ ಪ್ರಕಾಶ್ ಸಮಾಧಾನಪಡಿಸಿದರು. ಆರ್ಯವೈಶ್ಯ ನಿಗಮದ ಸದಸ್ಯರ ನೇಮಕಕ್ಕೂ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡಕ್ಕೂ ಸೇರದವರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.

ಇದು ಯಾವ ನ್ಯಾಯ? ಎಂದು ಕಾರ್ಯಕರ್ತರು ಅಸಮಾಧಾನಿಸಿದರು.ಈ ಬಗ್ಗೆ ನನಗೆ ಗೊತ್ತಿಲ್ಲ. ವಿಚಾರಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಭರವಸೆ ನೀಡಿದ ಎಚ್.ಡಿ. ದೇವೇಗೌಡರು, ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಲಾಗಿದೆ ತರಾತುರಿಯಲ್ಲಿ ಸಭೆ ಮೊಟಕುಗೊಳಿಸಿ ಹೊರ ನಡೆದರು. ಜೆಡಿಎಸ್ ಪಕ್ಷ ಸಂಘಟನೆಗಾಗಿ ಮಾಜಿ ಪ್ರಧಾನಿ ದೇವೇಗೌಡರು ಪಾದಯಾತ್ರೆ ಮಾಡಿದರೆ ನಮ್ಮದೇನೂ ತಕರಾರಿಲ್ಲ. ಅವರದ್ದು ರಾಜಕೀಯ ಪಕ್ಷ ಮಾಡಲಿ ಬಿಡಿ.ಸಭೆ ಮುಗಿಸಿ ಹೊರ ನಡೆಯುತ್ತಿದ್ದ ವೇಳೆ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅವರನ್ನು ಮೆಟ್ಟಿಲುಗಳ ಮೇಲೆಯೇ ತಡೆದ ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡದ್ದು ವರಿಷ್ಠರನ್ನು ದಿಗಿಲುಗೊಳಿಸಿತು.

ಪಕ್ಷದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿದವರಿದ್ದಾರೆ.ಅವರಿಗೆ ಸರಿಯಾದ ಸ್ಥಾನ ಸಿಕ್ಕಿಲ್ಲ. ಈ ರೀತಿ ಆದರೆ ಅವರು ಹೇಗೆ ಕೆಲಸ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ಪರ್ವಿುಷನ್ ತೆಗೆದುಕೊಂಡು ಸಿಎಂ ಅಮೆರಿಕಕ್ಕೆ ಹೋಗಬೇಕಾ? ಎಂದು ಬಿಜೆಪಿ ನಾಯಕರ ವಿರುದ್ಧ ಎಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.ಜೆಪಿ ಭವನದಲ್ಲಿ ಜೆಡಿಎಸ್ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಮಾಜದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಆಹ್ವಾನ ಇದ್ದ ಕಾರಣ ಸಿಎಂ ಹೋಗಿದ್ದಾರೆ. ಯಾರ ದುಡ್ಡಿನಲ್ಲೂ ಕುಮಾರಸ್ವಾಮಿ ಹೋಗಿಲ್ಲ. ಅವರ ಸ್ವಂತ ಖರ್ಚಿನಲ್ಲಿ ಹೋಗಿದ್ದಾರೆ ಎಂದರು.

error: Content is protected !!

Join the Group

Join WhatsApp Group