ಏಲಕ್ಕಿ ಕೆ.ಜಿ ಗೆ 2,900 ರೂ.➤ ಬೆಳೆಗಾರರ ಮೊಗದಲ್ಲಿ ಮಂದಹಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಸಾಂಬಾರ ರಾಣಿ ಮೊದಲ ದರ್ಜೆಯ ಏಲಕ್ಕಿ ಕೆ.ಜಿ.ಗೆ 2900 ರೂ.ದಾಟಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.ಗ್ವಾಟೆಮಾಲಾ ಪ್ರಪಂಚದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಏಲಕ್ಕಿ ಬೆಳೆಯುವ ದೇಶ. ಅಲ್ಲಿ ಪ್ರಾಕೃತಿಕ ವಿಕೋಪದಿಂದ ಉತ್ಪಾದನೆ ಕುಸಿದಿದೆ.

ಕಳೆದ ವರ್ಷದ ಪ್ರವಾಹದಿಂದಾಗಿ ಬೆಳೆ ನಾಶ, ಧಾರಣೆ ಏರಿಕೆಗೆ ಕಾರಣ.ಏಲಕ್ಕಿ ನೆರಳನ್ನು ಬಹುವಾಗಿ ಬಯಸುವ ಬೆಳೆ. ಉಷ್ಣತೆ ಹೆಚ್ಚಿದಂತೆ ಬೆಳೆ ನಾಶದ ಹಂತ ತಲುಪುತ್ತದೆ. ದೇಶೀಯವಾಗಿ ಕೇರಳದಲ್ಲಿ ಇಡುಕ್ಕಿ, ವಯನಾಡಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಏಲಕ್ಕಿ ಬೆಳೆಸಲಾಗುತ್ತದೆ. ಹಿಂದೆ ಕಾಫಿ ತೋಟಗಳಲ್ಲಿ ಕಾಡು ಮರಗಳು ಯಥೇಚ್ಛವಾಗಿದ್ದವು. ಅದರ ನಡುವೆ ಏಲಕ್ಕಿ ಬೆಳೆಸಲಾಗುತ್ತಿತ್ತು. ಪ್ರಸ್ತುತ ಕಾಡುಮರಗಳನ್ನು ಕಡಿತಲೆ ಮಾಡಿ ಸಿಲ್ವರ್‌ನಂಥ ಏಕರೀತಿಯ ಮರಗಳನ್ನು ಬೆಳೆಸುತ್ತಿದ್ದು, ನೆರಳಿನ ಸಮತೋಲನ ಹದತಪ್ಪಿರುವುದು ಬೆಳೆ ಕಡಿಮೆಯಾಗಲು ಕಾರಣ ಎನ್ನುತ್ತಿದ್ದಾರೆ ಬೆಳೆಗಾರರು. ಕರ್ನಾಟಕದಲ್ಲಿ ಕಾಫಿಯಂತೆ, ಕೇರಳದಲ್ಲಿ ಏಲಕ್ಕಿ ತೋಟಗಳನ್ನು ನಿರ್ಮಿಸುತ್ತಾರೆ.

ಆದರೆ, ಕರ್ನಾಟಕದಲ್ಲಿ ಮಿಶ್ರಬೆಳೆಯಾಗಿ ಅಡಕೆ, ಕಾಫಿ ತೋಟದ ನೆರಳಿನ ನಡುವೆ ಏಲಕ್ಕಿ ನಾಟಿ ಮಾಡುವುದು ವಾಡಿಕೆ. ಪ್ರಸ್ತುತ ಈ ಪ್ರಮಾಣ ಕುಸಿದಿದ್ದು, ಬಿಸಿಲೆ ಘಾಟ್ ಆಸುಪಾಸಿನ ತೋಟಗಳಲ್ಲಿ ಮಾತ್ರ ಏಲಕ್ಕಿ ಕೃಷಿ ಜೀವಂತವಾಗಿದೆ. ಏಲಕ್ಕಿಗೆ ಮಂಗಗಳ ಹಾವಳಿ ವಿಪರೀತವಾಗಿದೆ. ಏಲಕ್ಕಿ ಕಾಂಡದ ಸಿಹಿ ಹೀರುವ ಪ್ರಾಣಿಗಳು, ನಂತರ ಅವುಗಳನ್ನು ಪುಡಿಗಟ್ಟುತ್ತವೆ. ಅಳಿಲು ಏಲಕ್ಕಿ ಬೀಜ ತಿನ್ನುತ್ತವೆ. ಸೊರಗು ರೋಗಕ್ಕೆ ಹೆಕ್ಟೇರ್‌ಗಟ್ಟಲೇ ಕೃಷಿ ನಾಶವಾಗಿದೆ. ಏಲಕ್ಕಿಗೆ ಹಟ್ಟಿಗೊಬ್ಬರ ಬಳಕೆ ಅನಿವಾರ್ಯ.ಕೇರಳದಲ್ಲಿ ನಲ್ಲಾನಿ ತಳಿ ವ್ಯಾಪಕವಾಗಿದೆ. ಮಲೆನಾಡಿನ ತೋಟಗಳಲ್ಲಿ ಬೆಳೆಯುತ್ತಿದ್ದ ಕಾಡು ಏಲಕ್ಕಿಯನ್ನು ಮಾರ್ಪಾಡು ಮಾಡಿದ್ದಾರೆ. ಉಳಿದಂತೆ ಅಸ್ಸಾಂ ಕಪ್ಪು ಏಲಕ್ಕಿ ಪ್ರಸಿದ್ಧ. ಮೈಸೂರು ತಳಿ ಹೆಚ್ಚಿನ ಪ್ರದೇಶದಲ್ಲಿದೆ.

Also Read  ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ.!➤ ಹೈಕೋರ್ಟ್

ಸಕಲೇಶಪುರ ಏಲಕ್ಕಿ ಮಾರುಕಟ್ಟೆ ರಾಜ್ಯದಲ್ಲಿ ಅತಿ ದೊಡ್ಡದಾಗಿದ್ದು, ಇಲ್ಲಿ ದಿನನಿತ್ಯದ ಧಾರಣೆ ನಿಗದಿಯಾಗುತ್ತದೆ. ದೇಶದಿಂದ ಏಲಕ್ಕಿ ಹೆಚ್ಚಾಗಿ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತದೆ. ರಾಜ್ಯದಲ್ಲಿ ವಾಣಿಜ್ಯ ಬೆಳೆಯಾಗಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆ. ಮಿಶ್ರ ಬೆಳೆಯಾದ ಕಾರಣ ಏಲಕ್ಕಿಗೆ ಆದ್ಯತೆ ಸಿಗುತ್ತಿಲ್ಲ. ಬೆಳೆ ನಿರ್ಲಕ್ಷೃಕ್ಕೊಳಗಾಗಿದೆ. ಕಳೆದ ವರ್ಷದ ಭೀಕರ ಮಳೆಯಿಂದಾಗಿ ನಾಟಿ ಮಾಡಿದ ಗಿಡಗಳು ನೆಲಕಚ್ಚಿದ್ದು, ಪ್ರಸ್ತುತ ನಾಟಿಗೆ ಗಿಡಗಳೇ ಸಿಗದ ಸ್ಥಿತಿಯಿದೆ.ಕೇಂದ್ರೀಯ ಸಾಂಬಾರು ಮಂಡಳಿಯಿಂದ ಏಲಕ್ಕಿ ತೋಟ ನಿರ್ಮಾಣ, ನರ್ಸರಿಗೆ ಅನುದಾನ ಸಿಗುತ್ತಿದೆ. ಆದರೆ ಕಾಡುಪ್ರಾಣಿ ಹಾವಳಿ, ದರ ಏರಿಳಿತದಿಂದ ಏಲಕ್ಕಿ ಬೇಸಾಯ ಕಷ್ಟವಾಗಿದೆ. ಕಾಳುಮೆಣಸು, ಕಾಫಿ ಧಾರಣೆ ಇಳಿಕೆಯಿಂದ ಕೆಂಗೆಟ್ಟಿದ್ದ ಕೃಷಿಕರಿಗೆ ಏಲಕ್ಕಿ ಧಾರಣೆ ಏರಿಕೆ ಕೊಂಚ ಸಂತಸ ತಂದಿದೆ.

Also Read  ಕಡಬ: ರೈಲಿನಡಿಗೆ ಬಿದ್ದು ಓರ್ವ ಮೃತ್ಯು

error: Content is protected !!
Scroll to Top